Tuesday, September 16, 2008

"ಗೋ"ಕರಣ: ಸ್ವರ್ನವಲ್ಲಿಯಲ್ಲಿ ಬೆಂಕಿ !!!




ಶ್ರೀರಾಮಚಂದ್ರಾಪುರ ಮಠ v/s ಸ್ವರ್ಣವಲ್ಲಿ ಮಠ
  • ಮತ್ತೆ ಆರಂಭವಾಗಿದೆ ಕದನ..
  • ಪ್ರಾಬಲ್ಯಕ್ಕೆ ಜಿದ್ದಜಿದ್ದಿ
  • ಬುದ್ದಿ ಹೇಳಿದ ಪೇಜಾವರರು
  • ಗೋಕರ್ಣ ಅಭಿವ್ರದ್ದಿಗೆ ರಾಮಚಂದ್ರಾಪುರ ಮಠ ಶ್ರೀಗಳ ಸಾರಥ್ಯ
  • ವಿರೋಧಿಗಳ ಗುಂಪಿಗೆ ಸ್ವರ್ಣವಲ್ಲಿ ಶ್ರೀ ಸಾರಥ್ಯ







    ಕೊನೆಗೂ ಬೂದಿ ಮುಚ್ಚಿದ ಕೆಂಡ ಸ್ಪೋಟಗೋ ಂಡಿದೆ. ಗೋಕರ್ಣದಲ್ಲಿ ಸೆ.೧೫ ರಂದು ಅಲ್ಲಿಯ ಮಹಾಭಲೇಶ್ವರ ದೇವಾಲಯ ಶ್ರೀರಾಮಚಂದ್ರಾಪುರ ಮಠಕ್ಕೆ ಪುನ: ಬಂದಿರುವುದಕ್ಕೆ "ಮಹಾಸಂಕಲ್ಪ " ಸಭೆ ನಡೆಯುತ್ತಿದ್ದಾರೆ,ಹವ್ಯಕ ಸಮಾಜದ ಮತ್ತೊಂದು ಮಠವಾದ ಸ್ವರ್ಣವಲ್ಲಿ ಯಲ್ಲಿ ಇದನ್ನು ವಿರೋಧಿಸುವ ಸಭೆ ನಡೆಯುತ್ತಿತ್ತು!! ಗೊಕರ್ಣದೆವಾಲಯ ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂತರದ ನಂತರ ಉಂಟಾಗಿರುವ ವಾದ-ವಿವಾದದ ನಂತರ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಮೊದಲಬಾರಿಗೆ ಗೊಕರ್ಣ ಕ್ಕೆ ಭೆಟಿ ನೀಡಿ
    ಅದರ ಪುನರುತ್ಥಾನಕ್ಕೆ ಕಂಕಣ ಬದ್ಧರಾಗಿ "ಮಹಾಸಂಕಲ್ಪ" ಕ್ಕೆ ಕರೆ ನೀಡಿದ್ದರೆ ಹವ್ಯಕ ಸಮಾಜದ ಮತ್ತೊಂದು ಮಠ (ಸ್ವರ್ಣವಲ್ಲಿ ಮಠ) ಇದನ್ನು ಸ್ವಾಗತಿಸುವುದನ್ನು ಬಿಟ್ಟು ಸರಕಾರ ಗೊಕರ್ಣವನ್ನು ಹಿಂಪಡೆಯಬೇಕು ಎನ್ನುವ ವಿರೊಧಿಗಳನ್ನು ಕರೆಸಿಕೊಂಡು ಸಭೆ ನಡೆಸಿ ಇಷ್ಟುದಿನ ಮನಸ್ಸಿನೊಳಗಿದ್ದ ನೋವನ್ನು ಹೋರಹಾಕಿದರು.

    ಶ್ರೀರಾಮಚಂದ್ರಾಪುರ ಮಠ ಮತ್ತು ಸ್ವರ್ಣವಲ್ಲಿ ಮಠದ ನಡುವೆ ಪ್ರಾಬಲ್ಯಕ್ಕೆ ಜಿದ್ದಜಿದ್ದಿ ಮೊದಲಿನಿನ್ದಲೂ ಇದ್ದರು ಶ್ರೀರಾಮಚಂದ್ರಾಪುರ ಮಠ ದಷ್ಟು ಪ್ರಾಭಲ್ಯವನ್ನು ಧಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಶ್ರೀರಾಮಚಂದ್ರಾಪುರಮಠ ಈಗಿನ ಶ್ರೀಗಳ ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವ್ರದ್ದಿ ಕಂಡರೆ ಸ್ವರ್ಣವಲ್ಲಿ ಮಠದಲ್ಲಿ ಶ್ರೀಗಳನ್ನು ಮತ್ತು ಮಠವನ್ನು ನಿಯಂತ್ರಿಸುವ "ಭಟ್ಟಂಗಿಗಳು " ಮಾತ್ರ ಅಭಿವ್ರದ್ಧಿಯಾದರು.


    **)ಹವ್ಯಕ ಜನಾಂಗದ ೨ ಕಣ್ಣುಗಳು: ರಾಮಚಂದ್ರಾಪುರ ಮಠ ಮತ್ತು ಸ್ವರ್ಣವಲ್ಳಿ ಮಠಗಳು ಹವ್ಯಕ ಸಮಾಜದ
    ೨ ಕಣ್ಣು ಗಳು ಇದ್ದಂತೆ .ಇವು ಹವ್ಯಕ ಸಮಾಜದ ಮಠಗಳು.ರಾಮಚಂದ್ರಾಪುರ ಮಠ ಹವ್ಯಕ ಸಮುದಾಯದ ಜೊತೆ ಇತರ 18 ಜಾತಿಯನ್ನು ಒಳಗೊಂಡಿದೆ .ಆದರೆ ಸ್ವರ್ಣವಲ್ಳಿ ಮಠ ಕೇವಲ ಹವ್ಯಕರು ಅದರಲ್ಲೂ ಸೀರಸಿ ಮತ್ತು ಯಲ್ಲಾಪುರ ಭಾಗದ ಜನರು ಮಾತ್ರ ಹೆಚ್ಚಿಗೆ ನಡೆದು ಕೊಳ್ಳುತಾರೆ.ಹೆಚ್ಚಿನ ಹವ್ಯಕರು ರಾಮಚಂದ್ರಾಪುರ ಮಠಾಕ್ಕೆ ನಡೆದು ಕೊಳ್ಳುವುದರಿಂದ ಸ್ವರ್ಣವಲ್ಲಿಮಠ ಪ್ರಾಭಲ್ಯವನ್ನು ಸಾಧಿಸುವ ಕನಸು ಕನಸಾಗೇ ಉಳಿಯಿತು.ಕಳೆದವರ್ಷವಷ್ಟೇ ಒಂದೇ ವೇದಿಕೆಯಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದ ಉಭಯ ಶ್ರೀಗಳು ೨ ಮಠಗಳು ೨ ಕಣ್ಣು ಇದ್ದಂತೆ ಎಂದು ನುಡಿದಿದ್ದರು.ಆದರೆ ಅದನ್ನು ಮರೆತ ಸ್ವರ್ಣವಲ್ಲಿಶ್ರೀಗಳು ಸ್ವಾರ್ಥಸಾಧನೆಗೆ ಟೊಂಕಕಟ್ಟಿ ನಿಂತಿದ್ದಾರೆ,ತಾವು ವೊಬ್ಬ ಹವ್ಯಕ ಮಠಾಧೀಶ ಎಂಬುದನ್ನು ಮರೆತು.!


    ಶ್ರೀರಾಮಚಂದ್ರಾಪುರ ಮಠ ಗೋಕರ್ಣ ದೇವಾಲಯ ಬಂದ ಮೇಲೆ ಹವ್ಯಕ ಸಮುದಾಯದ ಮಠ ಕ್ಕೆ ಬಂತು
    ಎಂದು ಖುಷಿಪಡುವ ಬದಲು ೪ ದಿನದಲ್ಲಿ ಸರಕಾರದ ಕ್ರಮವನ್ನು ವಿರೋಧಿಸಿ ರಾಮಚಂದ್ರಾಪುರ ಮಠಕ್ಕೆ ಕೊಡಬಾರದು ಎಂದು ಪತ್ರಿಕಾ ಹೇಳಿಕೆ ನೀಡಿದರು. ಆಮೇಲೆ ವಿರೊಧಿಗಳ ಸಭೆ ಕರೆದು ಅವರಿಗೆ ಸಹಾಯ ಹಸ್ತವನ್ನು ನೀಡಿದರು.ಆದರೆ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ ಪಡಲಿಲ್ಲ.ವಿವಿಧ ಮಥಾಧೀಷರು ರಾಮಚಂದ್ರಾಪುರ ಮಠ ಕ್ಕೆ ಬೆಂಬಲ ವ್ಯಕ್ತ ಪಡಿಸಿದರೆ ಹವ್ಯಕ ಸಮಾಜದ ಶ್ರೀಗಳೇ ಬೆಂಬಲಿಸದೇ ಹವ್ಯಕರನ್ನು ಇಬಾಗಿಸಲು ಕಾರ್ಯ ತಂತ್ರ ರೂಪಿಸಿದ್ದಾರೆ ಎನ್ನುವುದು ಕೇಳಿಬರುತ್ತಿರುವ ಮಾತು.ಶ್ರೀರಾಮಚಂದ್ರಾಪುರ ಮಠ ಈಗಾಗಲೇ ಗೋಕರ್ಣ ದೇವಾಲಯ ಈ ಹಿಂದೆ ತನ್ನ ಸುಪರ್ಧಿಯಲ್ಲಿತ್ತು ಎಂದು ದಾಖಲೆಗಳನ್ನು ಸಲ್ಲಿಸಿದೆ.ಕೋರ್ಟನಲ್ಲೂ ಸಧ್ಯವೇ ವಿಚಾರಣೆಗೂ ಬರಲಿದೆ.ಒಂದು ವೇಳೆ ದಾಖಲೆಗಳು ಸರಿ ಇಲ್ಲ ಎಂದರೆ ಪುನ: ಸರಕಾರಕ್ಕೆ ದೇವಾಲಯ ಹೋಗುವುದರಲ್ಲಿ ಅನುಮಾನವಿಲ್ಲ.ಪುರಾತನ ,ಜಗದ್ವಿಖ್ಯಾತ ದೇವಸ್ಥಾನವನ್ನು ಯಾವ ಸರಕಾರವಾದರೂ ದಾಖಲೆಗಳೆ ಇಲ್ಲದೇ ಹಾಗೆ ಸುಮ್ಮನೇ ವಹಿಸಿಕೊಡುತ್ತದೆಯೇ?ಸರಕಾರ ಏನಾದರೂ ಶ್ರೀ ರಾಮಚಂದ್ರಾಪುರ ಮಠದ ಆಸ್ತಿಯೇ?.


    ಸ್ವರ್ಣವಲ್ಳಿ ಶ್ರೀಗಳು ಬುದ್ದಿವಂತರಾಗಿದ್ದಾರೆ ರಾಮಚಂದ್ರಾಪುರ ಮಠಕ್ಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದರು.ಹವ್ಯಕ ಸಮಾಜ ಒಂದಾಗಿದೆ ಎಂಬ ಸಂದೇಶವನ್ನು ರವಾನಿಸುತ್ತಿದ್ದರು.ಜನರಿಗೆ ಒಳ್ಳೆದನ್ನು ಮಾಡಿ ಎಂದು ಉಪದೇಶಿಸುವ ಶ್ರೀಗಳೇ ಶಿಷ್ಯರಲ್ಲಿ ಮತ್ಸರದ ಭಾವನೆಗಳನ್ನು ಬಿತ್ತುತ್ತಿರುವುದು ಸಾಮಾನ್ಯ ಜನತೆಗೂ ಒಬ್ಬ ಶ್ರೀಗಳಿಗೂ ಏನು ವ್ಯತ್ಯಾಸ ವೇನೆಂದು ಪ್ರಜ್ಞಾವಂತ ಜನತೆಯೇ ಮಾತಡಿಕೊಳ್ಳುತ್ತಿದ್ದಾರೆ.ಇದೆಲ್ಲ ಬೇಕಿತ್ತ ಸ್ವರ್ಣವಲ್ಲಿಶ್ರೀಗಳಿಗೆ ? ಎಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದುಕೊಳ್ಳುತ್ತದೆ.

    ಮಠದ ಆಸ್ತಿ ಮರಳಿ ಬಂದರೆ ಅದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದು ಸಾಧುವಲ್ಲ.ಯಾವುದೋ ಕಾಲಘಟ್ಟದಲ್ಲಿ ಶ್ರೀಮಠದ
    ಕೊಂಡಿಯಿಂದ ಕಳಚಿದ್ದ ಕೆಲವು ಕೊಂಡಿಗಳು ಈಗ ಮರಳಿ ಸೇರಿದರೆ ಉಳಿದವರಿಗೆ ಸಹಿಸಲು ಸಾಧ್ಯವಾಗುವುದಾದರೂ ಹೇಗೆ??!!.


    ಬುದ್ದಿ ಹೇಳಿದ ಪೇಜಾವರರು !
    ಸ್ವರ್ಣವಲ್ಲಿ ಯಾ ಶ್ರೀಗಳ ವಿರೋಧವನ್ನು ಕೇಳಿದ ಪೇಜಾವರರು ಸ್ವರ್ಣವಲ್ಲಿ ಶ್ರೀಗಳಿಗೆ ಬುದ್ದಿವಾದವನ್ನು ಹೇಳಿದ ಪ್ರಸಂಗ ನಡೆದಿರುವುದು ಸ್ವರ್ಣವಲ್ಲಿ ಶ್ರೀಗಳ ಮೊಂಡು ಹತಕ್ಕೊಂದು ಉದಾಹರಣೆ. "ನಿಮ್ಮ ಒಳಗಿನ ಅಸಮಾಧಾನವನ್ನು ಹೊರಗೆ ಹಾಕಬೇಡಿ.ಧಾರ್ಮಿಕ ಮುಖಂದರಲ್ಲೇ ಒಗ್ಗಟ್ಟಿಲ್ಲದಿದ್ದರೆ ಬೇರೆಯವರು ಕವಡೆ ಕಿಮ್ಮತ್ತು ಕೊಡುವುದಿಲ್ಲ ಧಾರ್ಮಿಕ ಕ್ಷೇತ್ರದಲ್ಲಿ "ರಾಜಕೀಯ " ಮಾಡಿ "ಹಸ್ತಕ್ಷೇಪ"ವನ್ನು ಕೈ ಬಿಡುವಂತೆ ಹೇಳಿರುವುದು ಹೊಸ ಸುದ್ದಿ.





    Website Hit Counters


    Web Counter

11 comments:

Unknown said...

ನನಗೂ ಅದೇ ಅನಿಸಿದ್ದು. ಸ್ವರ್ಣವಲ್ಲಿ ಸ್ವಾಮಿಗಳು ಗೋಕರ್ಣ ಹಸ್ತಾಂತರವನ್ನು ವಿರೋಧಿಸುತ್ತಿರುವುದ್ದೇಕೆ ಎಂದು.

ಗೋಕರ್ಣ ದೇವಸ್ಥಾನವೇನಾದ್ರು ಅವರ ಮಠಕ್ಕೆ ಸೇರಿತ್ತಾ? ಹೋಗಲಿ ಸ್ವರ್ಣವಲ್ಲಿಯ ಮಠವೇನಾದರೂ ಗೋಕರ್ಣದಲ್ಲಿ ಇದೆಯಾ?

ರಾಜಕಾರಣದಲ್ಲಾದರೇ ವಿರೋದ ಪಕ್ಷದವರು ಆಡಳಿತ ಪಕ್ಷವನ್ನು ವಿನಾಕಾರಣ ವಿರೋದಿಸುವುದನ್ನು ನಾವಿಂದು ಕಾಣುತ್ತೇವೆ. ಇದು ಮಠಗಳಿಗೂ ಹರಡಿದೆಯೇ?

ರಾಮಚಂದ್ರಾಪುರ ಮಠ ಎಂದೂ ಸ್ವರ್ಣವಲ್ಲಿ ಮಠವನ್ನು ವಿರೋದಿಸಿದ್ದು ನಾವ್ಯಾರು ಕೇಳಿಲ್ಲ. ಹಾಗಿದ್ದರೂ ಸ್ವರ್ಣವಲ್ಲಿಯ ಗುರುಗಳಿಗೆ ರಾಮಚಂದ್ರಾಪುರ ಮಠದ ಮೇಲೆ ವಿರೋದವೇಕೆ? ಇತ್ತೀಚಿನ ದಿನಗಳಲ್ಲಿ ರಾಮಚಂದ್ರಾಪುರ ಮಠ ಬಹಳ ಪ್ರಸಿದ್ದಿಗೆ ಬರುತ್ತಾಯಿದೆ. ಅದನ್ನು ಇವರಿಗೆ ಸಹಿಸಲಾಗದೇ ವಿರೋದ ವ್ಯಕ್ತಪಡಿಸಿರಬಹುದೇ? ಹಿಂದೆ

ಒಂದು ವ್ಯಕ್ತಿ/ಸಂಸ್ಥೆ ಮೇಲೆ ಬಂದ ಹಾಗೆ ಅದರ ಏಳ್ಗೆ ಸಹಿಸದವರು ಅದನ್ನು ಎಳೆಯುವುದನ್ನು ನಾವು ಇಂದಿನ ಸಮಾಜದಲ್ಲಿ ಹೆಚ್ಚಾಗಿ ಕಾಣುತ್ತೇವೆ. ನಾವು ಅವರು ಏರಿದ ಎತ್ತರಕ್ಕೆ ಏರೋಣ ಅಂತ ಅವರ ಮನಸ್ಸಲ್ಲಿ ಇರೋದಿಲ್ಲ. ಅವರು ನಾವಿರುವ ಜಾಗಕ್ಕೆ ಬರಲಿ ಅನ್ನೋ ಮನಸ್ಥಿತಿ. ಸ್ವರ್ಣವಲ್ಲಿ ಗುರುಗಳುೀ ಈ ರೀತಿ ಯಾಕೆ ಯೋಚಿಸುತ್ತಿದ್ದಾರೆ. ಅವರನ್ನು ಯಾರೋ ದಿಕ್ಕು ತಪ್ಪಿಸುತ್ತಿದ್ದಾರಾ?

ಒಂದು ಉತ್ತಮ ಸ್ಪರ್ದೆಯಿದ್ದರೆ ಅದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಆದರೆ ಅದು ಇಲ್ಲದಿದ್ದರೆ ಸಮಾಜ ಹಾಳಾಗುತ್ತದೆ. ಒಂದು ಸಮಾಜದ ಉನ್ನತ ಸ್ಥಾನದಲ್ಲಿರುವ ಮಠಾದೀಶರೇ ಹೀಗೆ ಮಾಡಿದರೆ ಅವರನ್ನು ನಂಬಿರುವ ಜನಗಳು ಹೇಗೆ ಮಾಡಿಯಾರು. ಅದರಿಂದ ಸಮಾಜ ಉದ್ದಾರವಾಗುತ್ತದೆಯೇ?

ನನ್ನ ಗೊಂದಲಗಳಿಗೆ ಯಾರಾದರು ಉತ್ತರಿಸುವಿರಾ? ನಾನು ಹೇಳಿದ್ದು ನನ್ನ ವಯಕ್ತಿಕ ಅಭಿಪ್ರಾಯ. ತಪ್ಪಿದ್ದರೆ ತಿದ್ದಿ. ಆದರೆ ತಿದ್ದುವ ಮುನ್ನ ನಿಮ್ಮಲ್ಲಿ ಸರಿಯಾದ ಸಾಕ್ಷ್ಯ ಅಥವಾ ಮಾಹಿತಿಯಿದೆಯಾ ಎಂದು ಒಮ್ಮೆ ನೋಡಿಕೊಳ್ಳಿ.

Unknown said...

very well written.

I totally agree with your comments. Truth should come out. Now Swarnavalli gurugalu or bhaktharu should tell us the reason.

Unknown said...

Article tumbha swarasyakaravagide mattu manamuttuvantide....

bharateeyarada navu modalu kavi,kakhi mattu khadige mahatva kottu badikiddavaru.adare kalanatardalli khadi mattu khaki mahatva kaledukonditu adare kavi matra monneyavaregu adara mahatva kaledukondiralilla adare yavaga swarnavalli srigalu gokarnada kelave kelavu janarannu nambi tammade ada sainya kattikondu gokarnada sri mmahabaleshwra devastanada bagge rajakeeyakke(rajakeeya yuddha) ilidro avatte swarnavalli srigala melidda bhakti avaru totta khaviya mahatva nanninda doorayitu. Itta Havyakara ondu swami peetha sri ramachandrapura matha gokarnada abhivraddige nandi hadiddare atta havyakara innondu matha asuyeyinda kaleleyuvudu eshtara mattige sari?
Yatigaladavaru kama, krodha,mada,matsaryagalannu tyajisirabeku adare illi nadedade bere. Matsaryavembudu tumbi tulukuttide.gokarnada bagge janabhipraya ene irali orva yati innobba yatige gourava, bembala needada kala bande hoyte....

idoo satya kaliyugada antya bande hoytu anta kanutte... ellavannu, ellarannu ashte yake tannannu tane kapadikolluva paristiti aa bhagavanta mahabaleshwaranige bantu... enta durgati.........

giri said...

nice article

Ravishankara Doddamani said...

Well Written. May God bless Svarnavalli Shree to rethink his stand.

Rajesh said...

'ಮಗಳು ವಿಧವೆಯಾದರೂ ಪರವಾಗಿಲ್ಲ, ಆದರೆ ಅಳಿಯ ಸಾಯಬೇಕು' - ಎಂಬ ನೀತಿಯನ್ನು ಸ್ವರ್ಣವಲ್ಲಿ ಶ್ರೀಗಳು ಅನುಸರಿಸಿದಂತಿದೆ. When Shree Raghaveshwara Swaamiji is doing so much for the Havyaka community and society in large, why should Swarnavalli Swamiji should oppose ?. Is he doing any service to the Havyaka community by that ?. Being a scholar and a swamiji himself he should know that he will find many who support him for opposing, but the very same people do not have any respect or concern for Havyakas. Its pathetic that he cannot rise above petty human considerations like jealosy and rivalry even while heading a Math. May he and his supporters see the light and welcome the govt.'s move and join hands with Shree Raghaveshwara Swamiji in bringing back the glory of Gokarna. I used to have respect for Swarnavalli Pontiff till a few days ago as a scholar and someone who is doing good job for the havyakas and society, but now....

ಚಿತ್ತದ ಚಿತ್ತಾರ said...

ಹರೇ ರಾಮ......
ನಿಮ್ಮದೆಲ್ಲರ ಅಭಿಪ್ರಾಯ ಸಾಧು.
ನಾವೆಲ್ಲ ಗಮನಿಸ ಬೇಕು. ಸ್ವರ್ಣವಲ್ಲಿ ಶ್ರೀಗಳು - ಪೆಜವರ ಶ್ರೀಗಳ ನಡುವಿನ ವ್ಯತ್ಯಾಸವನ್ನು.
ಒಬ್ಬರು ನವ ಯುವಕರು, ಮತ್ತೊಬ್ಬರು ಹಿರಿಯ ಯತಿಗಳು.
ಪೇಜಾವರ ಶ್ರೀಗಳು ಹಿರಿಯರಾದರೂ ರಾಮಚಂದ್ರಾಪುರ ಸ್ವಾಮಿಗಳನ್ನು ಬೆಂಬಲಿಸಿ, ಮತ್ತೂ ಗೌರವಾರ್ಹರಾದರು. ಸ್ವರ್ಣವಲ್ಲಿ ಸ್ವಾಮಿಗಳು ಕಿರಿಯರಾದರೂ( ರಾಮಚಂದ್ರಾಪುರಮಠದ ಸ್ವಾಮಿಗಳಿಗಿಂತ ಹಿರಿಯರು; ಲೋಕದ ದೃಶ್ಟಿಯಿಂದ ಅಭಿಪ್ರಾಯ ಪಟ್ಟದ್ದು.) ಅಸೂಯೆಯಿಂದ ಬೆಂಬಲಿಸದೇ ಸಣ್ಣವರಾದರು.ಇದು ನಮಗೊಂದು ಪಾಠ.
ಏನೇ ಅಂದರು ಸ್ವರ್ಣವಲ್ಲಿ ಸ್ವಾಮಿಗಳು ಸಾಮರ್ಥ್ಯ, ಜನಬಲ, ಮತ್ತು ಶಕ್ತಿಯ ದೃಶ್ಟಿಯಿಂದ ಅಬಲರು. ಆದರೂ ಯಾರೋ ಹೇಳಿದರು ಎಂಬ ಕಾರಣಕ್ಕೋ ಅಥವಾ ಅಸೂಯೆಯಿಂದಲೋ ವಿರೋಧಿಸುವ ಇವರನ್ನು ನೋಡಿ ನಗು ಬರುತ್ತೆ. ಇವರ ಮೂರ್ಖತನಕ್ಕೆ ಏನನ್ನೋಣ? ಕರುಣಾಮೂರ್ತಿಗಳಾದ ರಾಮಚಂದ್ರಾಪುರ ಮಠದ ಸ್ವಾಮಿಗಳು ಅಕಸ್ಮಾತ್ ತಮ್ಮ ಶಿಷ್ಯರಿಗೆ ವಿರೋಧಿಸುವ ಆಜ್ಞೆ ಇತ್ತರೆ ಸ್ವರ್ಣವಲ್ಲಿ ಸ್ವಾಮಿಗಳು ಇವರನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಉಂಟೆ ಅಂತ ಪರೀಕ್ಷಿಸಿಕೊಳ್ಳಬೇಕು.
ಲೋಕದ ದೃಷ್ಟಿಯಿಂದ ಸ್ವರ್ಣವಲ್ಲಿ ಸ್ವಾಮಿಗಳು ಸಣ್ಣವರಾಗಿ ಹೋಗಿದ್ದಾರೆ. ಇನ್ನದರೂ ತಮ್ಮದೆಷ್ಟೊ ಅಷ್ಟು ನೋಡಿಕೊಂಡಿದ್ದರೆ ಒಳಿತಾದೀತು ಅಲ್ಲವೇ?

Suma said...

Gokarnada vishayakke, Namma Nammalle kaleyuvadanna bittu,
Deshadellede balatkara matantara maduttiruvara virudda horadali or Hindu jagrati deshada oddagalakkuu moodisuva karyakrama madali,adu bittu Shree Ramachandrapura mathada virudda horaduvudaralli arta illa.idi samajave oppikondiruvaga matyake samajave horaduttade ??????

Jnanada dari torisuvarinda Kali/Ravana ennuvantaha matu.... novuntu madutte.Shree Ramachandrapura Matakke hana madale bekandre "Mahabaleshwara" Devastana bekagirlilla... adu hana madalu Devastana tagoluvastu kelamattadalli illa.
"Yadbhavam tadbhavati"

Namma samajada ella Swamigalu seridre yava matantarigalu barlikke agalla. Matte British kalakke kondoyyuva paristi beda.......Sanyasigalige yavude jati illa(Adanne bittare matra Sanyasi anta andu kondiddeve). Namma samjada "Shree Pejavara", "Adi chunchunagiri" Shrigala vishala manobhavanegalu mattu avara Samaja mukhi karyakramagalu namage dari deepavagabeku.......

Adu yake mahatmarenisikondorige arta agta illa!!!!!!!!!!

Vayasalli kiridadaru hiriya sadane maduttiruva Shree Ramachandrapura mathada shreegale Nimage vandane.

Unknown said...

I agree with ಚಿತ್ತದ ಚಿತ್ತಾರ

Unknown said...

ಸ್ವರ್ಣವಲ್ಲಿ ಶ್ರೀಗಳು ವಿರೋಧಿಗಳಿಗೆ ಅಭಯ ನೀಡಿರುವುದು ಭಕ್ತರ ರನ್ನು ನಡು ನೀರಿನಲ್ಲಿ ಬಿಡಬಾರದು ಎಂದು. ಅದರಲ್ಲಿ ತಪ್ಪೇನಿದೆ.? ಸರಕಾರ ಹಿಂದು ಮುಂದಿಲ್ಲದೇ ೧ ಮಠಕ್ಕೆ ಒಂದು ಪ್ರಖ್ಯಾತ ದೇವಸ್ಥಾನವನ್ನು ವಹಿಸಿಕೊಡುತ್ತದೆ ಅಂದರೆ ಮೂರ್ಖತನದ ಪರಮಾವಧಿ ಅಲ್ಲವೇ? ಸ್ವರ್ಣವಲ್ಲಿ ಮಠ ಹವ್ಯಕ ಮಠ ಎಂಬುದು ನಿಜ.ಆದರೆ ಅನ್ಯಾಯ ನಡೆಯುತ್ತಿದ್ದರೆ ಅದನ್ನು ಬೆಂಬಲಿಸ ಬೇಕೆ?
ಅಷ್ಟಕ್ಕೂ ಶ್ರೀರಾಮಚಂದ್ರಾಪುರ ಮಠ ತನ್ನ ಬಳಿ ಇರುವ ದಾಖಲೆಗಳನ್ನು ಇನ್ನುವರೆಗೂ ಸಾರ್ವಜನಿಕವಾಗಿ ಯಾಕೆ ಪ್ರಕತಿದ್ಸದೆ ಮೌನ ತಾಳಿದೆ? ಕೇವಲ ಸ್ವಾಮೀಜಿಯವರನ್ನು "ಗೋಕರ್ಣ ಮಂದ ಲಾಧೀಷ್ವರ" ಪ್ರಕಾರ ದೇವಾಲಯ ಕೊಟ್ಟರೆ, ಅದೇ ರೀತಿ ಸ್ವರ್ನವಲ್ಲಿಯವರ ಹೆಸರಲ್ಲೂ ಇದೆ.ಇತರ ಸ್ವಾಮಿಜಿ ಹೆಸರಲ್ಲೂ ಇದೆ. ಅವರಿಗೆ ಯಾಕೆ ಕೊಡಲಿಲ್ಲ ಹಾಗಾದರೆ ??
ಇಷ್ಟೆಲ್ಲಾ ಪ್ರಶ್ನೆ ಇದ್ದರೂ ಸ್ವರ್ಣವಲ್ಲಿಯವರನ್ನು ಪ್ರಶ್ನಿಸುವುದು ಎಷ್ಟು ಸರಿ?

Unknown said...

ಆತ್ಮೀಯ ಗಂಗಾದರ್ ಅವರೇ,

>ಸರಕಾರ ಹಿಂದು ಮುಂದಿಲ್ಲದೇ ೧ ಮಠಕ್ಕೆ ಒಂದು ಪ್ರಖ್ಯಾತ ದೇವಸ್ಥಾನವನ್ನು ವಹಿಸಿಕೊಡುತ್ತದೆ ಅಂದರೆ ಮೂರ್ಖತನದ ಪರಮಾವಧಿ ಅಲ್ಲವೇ?

ಬಹುಶಃ ನೀವು ಸರಿಯಾದ ಮಾಹಿತಿಯಿಲ್ಲದೇ ಮಾತನಾಡುತ್ತಿದ್ದೀರಾ? ದೇವಸ್ಥಾನದ ಹಸ್ತಾಂತರ ಪ್ರಕ್ರಿಯೆ ಕೇವಲ ಒಂದೆರಡು ದಿನಗಳಲ್ಲಿ ಆದುದ್ದಲ್ಲ. ಶ್ರೀರಾಮಚಂದ್ರಾಪುರ ಮಠ ಸರಕಾರವನ್ನು ಗೋಕರ್ಣ ಕೊಡಿ ಎಂದು ಗೋಗೆರೆಯಲಿಲ್ಲ. ಗೋಕರ್ಣದವರೇ ಸರಕಾರಕ್ಕೆ ಪತ್ರ ಬರೆದು ಗೋಕರ್ಣ ದೇವಸ್ಥಾನ ಶ್ರೀಮಠಕ್ಕೆ ಸೇರಿದ್ದು. ಅದನ್ನು ಮರಳಿ ಕೊಡಿ ಎಂದಿದ್ದು. ನಂತರ ಅದು ಗ್ರಾಮಪಂಚಾಯತಿ.... ಮುಂತಾದ ಕಡೆ ಪರಿಶೀಲನೆಯಾಗಿ ನಂತರ ಸರಕಾರಕ್ಕೆ ಹೋಗಿದ್ದು. ಅದನ್ನು ಸರಕಾರ ಕಾನೂನು ತಜ್ನರ ಹತ್ತಿರ ತೋರಿಸಿ ಅವರ ಅಭಿಪ್ರಾಯ ಪಡೆದು ಕಾನೂನು ರೀತ್ಯಾ ಹಸ್ಥಾಂತರ ಮಾಡಿದೆ. ಸುಮ್ಮ ಸುಮ್ಮನೇ ದೇವಾಲಯವನ್ನು ಹಸ್ತಾಂತರಿಸಲು ಸರಕಾರ ರಾಮಚಂದ್ರಾಪುರ ಮಠಕ್ಕೆ ಸೇರಿದ್ದೇ?

ಸರ್ಣವಲ್ಲಿ ಶ್ರೀಗಳು ನೀವು ಹೇಳಿದ ಹಾಗೆ ನಡು ನೀರಲ್ಲಿ ಮುಳುಗುತ್ತಿರುವ ಭಕ್ತರಿಗೆ ಅಭಯ ನೀಡಲು ವಿರೋಧಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು. ಸ್ವರ್ಣವಲ್ಲಿ ಶ್ರೀಗಳಿಗೆ ರಾಮಚಂದ್ರಾಪುರ ಮಠದ ಶ್ರೀಗಳೇನಾದರೂ ಅಪರಿಚಿತರೇ. ಅವರೇ ರಾಮಚಂದ್ರಾಪುರ ಮಠದ ಶ್ರೀಗಳನ್ನು ಕೇಳಬಹುದಾಗಿತ್ತು. ಒಂದಿಷ್ಟು ಜನ ಭಕ್ತರು ನಡು ನೀರಿನಲ್ಲಿದ್ದಾರೆ. ಅವರನ್ನು ರಕ್ಷಿಸಬೇಕು ಅಂತ ಹೇಳಿದ್ದರೇ ಅವರಿಗೆ ಯಾರು ನಡು ನೀರಿನಲ್ಲಿದ್ದಾರೆ ಮತ್ತು ಯಾಕಿದ್ದಾರೆ ಅಂತ ರಾಮಚಂದ್ರಾಪುರ ಮಠದ ಶ್ರೀಗಳು ಹೇಳುತ್ತಿದ್ದರು.

ಗೋಕರ್ಣದಲ್ಲಿ ಎಷ್ಟು ಜನ ವಿರೋಧ ಮಾಡ್ತಾಯಿದ್ದಾರೆ ಅಂತ ತಮಗೆ ಗೊತ್ತಿದ್ದೆಯೇ? ಕೇವಲ ಬೆರಳೆಣಿಕೆಯಷ್ಟು. ಅವರು ಯಾರು ಅಂತ ನಿಮಗೇನಾದರೂ ಗೊತ್ತೆ? ಇಷ್ಟು ದಿನ ಬಕಾಸುರರಂತೆ ಬಂದ ಭಕ್ತರನ್ನು ದೇವರ ಹೆಸರಲ್ಲಿ ಸುಲಿಯುತ್ತಿದ್ದ ಮತ್ತು ಭಾಹ್ಮಣರಿಗೆ ಕೆಟ್ಟ ಹೆಸರು ತಂದಿಟ್ಟ ಕೆಲವೇ ಕೆಲವೇ ಜನಗಳು. ಶ್ರೀಮಠ ದೇವಸ್ಥಾನದ ಆಡಳಿತವನ್ನು ವಹಿಸಿಕೊಂಡರೇ ಎಲ್ಲಿ ತಮ್ಮ ಬುಡಕ್ಕೆ ಕತ್ತರಿಯಾಗುತ್ತದೆಯೋ ಎನ್ನುವ ಭಯ ಅವರಲ್ಲಿ. ನೀವು ಒಮ್ಮೆ ಗೋಕರ್ಣ ಬ್ಯಾಂಕಿನಲ್ಲಿ ಎಷ್ಟು ಹಣವಿದೆಯೆಂದು ತಿಳಿದುಕೊಳ್ಳಿ. ಒಂದು ಅಂದಾಜಿನ ಪ್ರಕಾರ ಸುಮಾರು ೧೫೦ ಕೋಟಿಗಿಂತನೂ ಜಾಸ್ತಿ. ಇದು ಗಾಳಿ ಸುದ್ದಿಯಲ್ಲ. ಸರಿಯಾದ ಮಾಹಿತಿ. ಅದೂ ಬ್ಯಾಂಕಿನಿಂದ ಬಂದಿದ್ದು.

>ಸ್ವರ್ಣವಲ್ಲಿ ಮಠ ಹವ್ಯಕ ಮಠ ಎಂಬುದು ನಿಜ.ಆದರೆ ಅನ್ಯಾಯ ನಡೆಯುತ್ತಿದ್ದರೆ ಅದನ್ನು ಬೆಂಬಲಿಸ ಬೇಕೆ?

ಎಷ್ಟೋ ಜನ ಭಕ್ತರು(ಹವ್ಯಕರು) ನಡು ನೀರಿನಲ್ಲಿದ್ದಾರೆ. ಅದನ್ನು ಬಿಟ್ಟು ಗೋಕರ್ಣದಲ್ಲಿ ನಡುನೀರಿನಲ್ಲಿರು ಭಕ್ತರನ್ನೇ ಸ್ವರ್ಣವಲ್ಲಿ ಶ್ರೀಗಳು ರಕ್ಷಿಸುತ್ತಿರುವುದು ಏಕೆ? ಮೊನ್ನೆ ಮೊನ್ನೆ ಸಾಗರದಲ್ಲಿ ಒಬ್ಬ ಅಪ್ರಾಪ್ತ ಹವ್ಯಕ ಹುಡಿಗಿಯ ಅತ್ಯಾಚಾರವಾಯಿತು. ಅದಕ್ಕೆ ಸ್ವರ್ಣವಲ್ಲಿ ಶ್ರೀಗಳ ಪ್ರತ್ರಿಕ್ರಿಯೆ ಎನು? ಶ್ರೀಮಠದ ಸೀಮಾಪರಿಷತ್ತುಗಳು ಅದನ್ನು ಪ್ರತಿಭಟಿಸಿದರು.

>ಅಷ್ಟಕ್ಕೂ ಶ್ರೀರಾಮಚಂದ್ರಾಪುರ ಮಠ ತನ್ನ ಬಳಿ ಇರುವ ದಾಖಲೆಗಳನ್ನು ಇನ್ನುವರೆಗೂ ಸಾರ್ವಜನಿಕವಾಗಿ ಯಾಕೆ ಪ್ರಕತಿದ್ಸದೆ ಮೌನ ತಾಳಿದೆ?

ನಡುನೀರಿನಲ್ಲಿದ್ದ ಭಕ್ತರು ಹಸ್ಥಾಂತರವಾದ ತಕ್ಷಣ ಕೋರ್ಟಿಗೇಕೆ ಹೋಗಲಿಲ್ಲ!!! ಕೋರ್ಟಿಗೆ ಹೋಗಲು ಅಷ್ಟು ದಿನ ಬೇಕಾಗಿತ್ತೆ?. ಸದ್ಯ ಇದು ಕೋರ್ಟಿನಲ್ಲಿದೆ. ವಿಚಾರಣೆಯಾಗುತ್ತದೆ. ಆಗ ನಿಮಗೂ ನಮಗೂ ಗೊತ್ತಾಗುತ್ತದೆ.

>ಕೇವಲ ಸ್ವಾಮೀಜಿಯವರನ್ನು "ಗೋಕರ್ಣ ಮಂದ ಲಾಧೀಷ್ವರ" ಪ್ರಕಾರ ದೇವಾಲಯ ಕೊಟ್ಟರೆ, ಅದೇ ರೀತಿ ಸ್ವರ್ನವಲ್ಲಿಯವರ ಹೆಸರಲ್ಲೂ ಇದೆ.ಇತರ ಸ್ವಾಮಿಜಿ ಹೆಸರಲ್ಲೂ ಇದೆ. ಅವರಿಗೆ ಯಾಕೆ ಕೊಡಲಿಲ್ಲ ಹಾಗಾದರೆ ??

ಸರಕಾರ ದೇವಾಲಯವನ್ನು ಕೊಟ್ಟಿದ್ದು ಬರೀ ""ಗೋಕರ್ಣ ಮಂದ ಲಾಧೀಷ್ವರ"" ಅಂತ ಇದ್ದಿದ್ದಕ್ಕೆ ಅಂತ ತಿಳಿದುಕೊಂಡಿದ್ದು ನಿಮ್ಮ ಮೂರ್ಖತನದ ಪರಮಾವಧಿ. ಮೇಲೆ ಹಸ್ತಾಂತ ಪ್ರಕ್ರಿಯೆ ಹೇಗೆ ನಡೆಯಿತು ಅಂತ ಮೇಲೆ ಹೇಳಿದ್ದೇನೆ. ಒಮ್ಮೆ ಮತ್ತೆ ಕಣ್ಣಾಯಿಸಿ.

ನೀವು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರಿದ್ದೇನೆ. ನಾನು ಈ ಮೊದಲು ಕೇಳಿದ ಪ್ರಶ್ನೆಗಳಿಗೆ ತಾವು ಉತ್ತರಿಸೋಣವಾಗಲಿ.