Wednesday, September 24, 2008

ರಾಮಚಂದ್ರಾಪುರ ಮಠದ ಮಾನ ರಕ್ಷಣೆಗೆ ಸ್ವರ್ಣವಲ್ಲಿ ಶ್ರೀ!!!


ಅಂತು ಸ್ವರ್ಣವಲ್ಲಿ ಶ್ರೀಗಳಿಗೆ ಬುದ್ದಿ ಬಂದಂತಿದೆ.
ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಗೋಕರ್ಣ ವಿಷಯದಲ್ಲಿ ವೋರೋಧಿಸುತ್ ಟೊಂಕ ಕಟ್ಟಿ ನಿಂತಿದ್ದ ಅವರು ಇವಾಗ ತಮ್ಮ ನಿಲುವನ್ನು ಬದಲಿಸಿದ್ದಾರೆ!!! ಇಷ್ಟು ದಿನ ತಮ್ಮ ನಿಲುವನ್ನು ಎಲ್ಲರ
ಮುಂದೆ ಹೇಳಿ ನಗೆ ಪಾತಳಿಗೆ ಗುರಿಯಾಗಿದ್ದ ಸ್ವಾಮಿಜಿ ,ತಮ್ಮ ರಾಗದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದಾರೆ. ಇಷ್ಟು ದಿನ ತಮ್ಮ ಸ್ಪಷ್ಟ ಅಭಿಪ್ರಾಯ ಹೇಳಿದ್ದ ಅವರು ಇವಾಗ ಸರಕಾರಕ್ಕೆ ಪತ್ರ ಬರೆದು ದೇವಸ್ತಾನದ ಉಸ್ತುವಾರಿಯನ್ನು ಮಠಾಧೀಶರ ಸಮಿತಿಗೆ ಒಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.ಅಷ್ಟಲ್ಲದೆ, ಕೋರ್ಟ್ ನಲ್ಲೂ ಸರಕಾರಕ್ಕೆ ಮತ್ತು ದೇವಸ್ಥಾನ ತೆಗೆದುಕೊಂಡ ರಾಮಚಂದ್ರಾಪುರ ಮಠಕ್ಕೆ ಮುಖ ಭಂಗ ವಾಗಲಿದೆ ಎಂದು ಭವಿಷ್ಯವನ್ನು ನುಡಿದಿದ್ದಾರೆ!! ಅಷ್ಟಲ್ಲದೆ ಶ್ರೀರಾಮಚಂದ್ರಾಪುರ ಮಠಕ್ಕೆ ಇದರಿಂದ ಆಗುವ ಮುಖ ಭಂಗ ತಪ್ಪಿಸಲು ತಾವು ತಯಾರಿರುವುದಾಗಿ ಹೇಳಿ ತಮ್ಮ "ಅಸ್ವಸ್ಥತೆ" ಯನ್ನು ತೋರ್ಪಡಿಸಿದ್ದಾರೆ.ಶ್ರೀ ರಾಮಚಂದ್ರಾಪುರ ಮಠಕ್ಕೆ ಆಗುವ ಮುಖ ಭಂಗವನ್ನು ತಪ್ಪಿಸಲು ಸ್ವರ್ಣವಲ್ಲಿ ಶ್ರೀಗಳು ಉತ್ಸುಹಕರಾಗಿದ್ದರೆ, ಮಹಾಸಂಕಲ್ಪ ಸಭೆ ನಡೆಯುವಾಗ ವಿರೋಧಿಗಳ ಸಭೆ ಕರೆದಿದ್ದು ಯಾಕಾಗಿ? ಹಸ್ತಾಂತರಕ್ಕೆ ತಮ್ಮ ವಿರೋಧವಿದೆ.ಆದರೆ ರಾಮಚಂದ್ರಾಪುರ ಮಠಕ್ಕೆ ವಿರೋಧವಿಲ್ಲ. ಎನ್ನುವ ಅವರು, ರಾಮಚಂದ್ರಾಪುರ ಮಠದ ಶ್ರೀಗಳಿಗೆ ಕಲಿ, ತುಘಲಕ್ ಎಂದೆಲ್ಲ ಕರೆದಿದ್ದು ಯಾಕಾಗಿ? ಅಷ್ಟಕ್ಕೂ ಇವಾಗ ರಾಜಿ ಸೂತ್ರ ಮಾಡಿಕೊಳ್ಳದಿದ್ದರೆ ತಮಗೆ ಉಳಿಗಾಲ ಇಲ್ಲ ಎಂದು ತಿಳಿದು ರಾಘವೇಶ್ವರ ಶ್ರೀಗಳೊಂದಿಗೆ ರಾಜಿಗೆ ಪ್ರಯತ್ನ ಪಡುತ್ತಿರುವುದು ವಿಪರ್ಯಾಸವೇ ಸರಿ.ಗೋಕರ್ಣಕ್ಕೆ ಸಂಭಂಧ ಪಡದ ಶೃಂಗೇರಿ ಶ್ರೀಗಳು ಇವರಿಗೆ ಗೋಕರ್ಣ ಉದ್ಧಾರ ಮಾಡಲು ಯಾಕೆ ಬೇಕೋ? ಇವರು ವಿರೋಧ ಇಲ್ಲ ಎಂದು ಹೇಳಿದ್ದರೆ ಮಾಧ್ಯಮದಲ್ಲಿ ಮೊದಲು ಹಾಗೆ ವರಧಿ ಯಾಗುತ್ತಿತ್ತು. ಮಾಧ್ಯಮದವರು ತಿರುಚಿ ಬರೆದಿದ್ದರು ಮರುದಿನವೇ ಪ್ರತಿಕ್ರಿಯೆ ಕೊಡಬಹುದಿತ್ತಲ್ಲ? ರಾಮಚಂದ್ರಾಪುರ ಮಠ ಗೋಕರ್ಣ ತನ್ನ ಆಸ್ತಿ ಎಂದು ಹೇಳುತ್ತಿದ್ದರು ಅದರ ದಾಖಲೆಯನ್ನು ಪರಿಶೀಲಿಸಲು ಮುಂದಾಗದ ಅವರು, ಎಲ್ಲರ ಎದುರು ಮಾನ ಕಳೆದಾದ ಮೇಲೆ ಈಗ ಮಾನ ಉಳಿಸಲು ಪಯತ್ನ ಪಟ್ಟೆ ಎನ್ನುತ್ತಾ ಮತ್ತಷ್ಟು ಹಾಸ್ಯಾಸ್ಪದಆಗುತ್ತಿದ್ದಾರೆ . !!!

Monday, September 22, 2008

ರಣರಂಗಕ್ಕೆ ವೇದಿಕೆ ಸಜ್ಜು






ರಣರಂಗಕ್ಕೆ ವೇದಿಕೆ ಸಜ್ಜು






  • "ಮಹಾಸಂಕಲ್ಪಕ್ಕೆ” ವಿರುದ್ಧವಾಗಿ ವಿರೊಧಿಗಳ ಸಭೆ


  • ಸ್ವರ್ಣವಲ್ಲಿ ಶ್ರೀಗಳ ಸಾರಥ್ಯ


  • ರಾಮಚಂದ್ರಾಪುರ ಮಠ ದ ಕಾರ್ಯಕ್ರಮಕ್ಕಿಂತ ಹೆಚ್ಚು ಜನರನ್ನು ಸೇರಿಸುವ ತವಕ


  • ರಾಮಚಂದ್ರಾಪುರ ಮಠಕ್ಕೆ ಸಡ್ಡುಹೊಡೆಯುವರೇ ಸ್ವರ್ಣವಲ್ಲಿ?


ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠ ಕ್ಕೆ ಹಸ್ತಾಂತರಿಸಿದ ಕ್ರಮದ ಪರ, ವಿರೋಧದ ನಡುವೆ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಅದ್ಧೂರಿ ಪುರ ಪ್ರವೇಶಿಸಿ ,”ಗೋಕರ್ಣ ಪುನರುತ್ಥಾನ ಮಹಾಸಂಕಲ್ಪ ಸಭೆ” ನಡೆಸಿ ಯಶಸ್ವಿಯಾದರೆ, ಈಗ ಆ ಸಮಾರಂಭಕ್ಕೆ ವಿರೋಧವಾಗಿ ಮತ್ತೊಂದು ಸಭೆ ಸಧ್ಯದಲ್ಲೇ ನಡೆಯಲಿದೆ.!!
ಗೋಕರ್ಣದ ಪುನರ್ ಸಂಕಲ್ಪಕ್ಕೆ ಪಣತೊಟ್ಟು ರಾಮಚಂದ್ರಾಪುರ ಮಠದ ಶ್ರೀಗಳು ಮಹಾಸಂಕಲ್ಪಕ್ಕೆ ಕರೆ ನೀಡಿದ್ದರೇ, ಈ ಸಮಾರಂಭಕ್ಕೆ ಪ್ರತಿ ಸಭೆಯನ್ನು (ಹಸ್ತಾಂತರ ವಿರೋಧ) ಕರೆದವರು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಶ್ರೀಗಳು.
ಈಗಾಗಲೇ ಹಸ್ತಾಂತರ ವಿರೋಧಿಸುತ್ತಿರುವ ಗಂಗಾಧರೇಂದ್ರ ಶ್ರೀಗಳು ಸಾರ್ವಜನಿಕವಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದು,ಇಂಥ ಸನ್ನಿವೇಶದಲ್ಲಿ ಸಧ್ಯದಲ್ಲೇ ಕುಮಟಾದಲ್ಲಿ ವಿರೋಧಿಗಳ “ಅದ್ಧೂರಿ” ಸಭೆಯನ್ನು ಆಯೋಜಿಸುತ್ತಿದ್ದಾರೆ.



* ಹಿರಿಯರಾದರು ಕಿರಿಯ ಬುದ್ದಿ.:



ಸೆ.೧೫ ರಂದು “ಮಹಾಸಂಕಲ್ಪ”ದ ದಿನ ಅಲ್ಲೇ ಪ್ರತಿಭಟನೆ ಮಾಡಲು ನಿರ್ಧರಿಸಿದ್ದ “ವಿರೋಧಿಗಳು” ಕಾನೂನು ತೊಡಕಿನಿಂದ ಸುಮ್ಮನಿರ ಬೇಕಾಯಿತು.ನಂತರ ಸ್ವರ್ಣವಲ್ಲಿ ಗೆ ಹೋಗಿ ಅಲ್ಲಿ ವಿರೋಧಿಗಳ ಸಭೆಯನ್ನು ಸ್ವರ್ಣವಲ್ಲಿ ಶ್ರೀಗಳ ನೇತ್ರತ್ವದಲ್ಲಿ ಮಾಡಿ ಮುಗಿಸಿದರು.
ಚಾತುರ್ಮಾಸ್ಯದ ಕೊನೆಯ ದಿನವಾದ ಅಂದು ಯತಿಗಳು ತಮ್ಮ ಮನಸ್ಸನ್ನು ಒಳ್ಳೆಯ ಕಾರ್ಯಕ್ಕೆ ಮೀಸಲಿಡಬೇಕಾದ ದಿನದಂದು ಬೇಡದ “ವಿರೋಧಿಗಳ” ಸಭೆ ಕರೆದರು.ಅತ್ತ ರಾಮಚಂದ್ರಾಪುರ ಮಠದ ಶ್ರೀಗಳು ಅಂದು ಗೋಕರ್ಣ ಮಹಾಸಂಕಲ್ಪದ ಸಮಾಜೋಪಕಾರಿ ಸಭೆ ಮಾಡಿ ಶಹಬಾಸ್ ಅನ್ನಿಸಿಕೊಂಡರೆ ಅದೇ ಮತ್ತೊಂದು ಶ್ರೀಗಳಾದ ಸ್ವರ್ಣವಲ್ಲಿಯವರು ಮತ್ತೊಂದು ಸಮಾಜದ ವಿರೋಧಿ ಕಾರ್ಯದಲ್ಲಿ ಮಗ್ನರಾಗಿದ್ದರು!!
ಇಲ್ಲೇ ಇರುವುದು ವ್ಯತ್ಸಾಸ. ಶ್ರೀರಾಮಚಂದ್ರಾಪುರ ಮಠ ಬೇರೆಯವರ ತಂಟೆ ತಕರಾರಿಗೆ ಹೋಗದೆ ತನ್ನ ಕಾರ್ಯದಲ್ಲಿ ಮಗ್ನವಾಗಿ ಇಷ್ಟು ಬೆಳೆದರೆ , ಬೆರೆಯವರು ಬೆಳೆಯುವುದನ್ನು ಸಹಿಸದ ಸ್ವರ್ಣವಲ್ಲಿ ಮಠ ಎಲ್ಲದರಲ್ಲೂ ಮೂಗು ತೂರಿಸಿ ಅಷ್ಟೆ ಹಿಂದುಳಿದಿತು.ಇಲ್ಲಿ ಮತ್ತೋಂದು ವಿಷಯವನ್ನು ಗಮನಿಸಬೇಕು. ಸ್ವರ್ಣವಲ್ಲಿಯವರು ರಾಮಚಂದ್ರಾಪುರ ಮಠದ ಶ್ರ್ರೀಗಳಿಗಿಂತ ಮುಂಚಿತವಾಗಿ ಪೀಠಾರೋಹಣ ಮಾಡಿದವರು.ಯತಿ ಪರಂಪರೆಯಲ್ಲಿ ಚಾತುರ್ಮಾಸ್ಯ ಹೆಚ್ಚಾದವರು ಹಿರಿಯರ ಸ್ಥಾನದಲ್ಲಿ ನಿಲ್ಲುತ್ತಾರೆ.ವಯಸ್ಸಿನಲ್ಲಿ ಈ ೨ ಯತಿಗಳು ಸಮಾನರಾದರೂ ಚಾತುರ್ಮಾಸ್ಯದ ವಿಷಯದಲ್ಲಿ ಸ್ವರ್ಣವಲ್ಲಿಯವರು ಹಿರಿಯರಾಗುತ್ತರೆ.ರಾಮಚಂದ್ರಾಪುರ ಮಠದ ಶ್ರ್ರೀಗಳಿಗಿಂತ ಸ್ವರ್ಣವಲ್ಲಿ ಶ್ರೀಗಳು ಹಿರಿಯರಾದರೂ “ಹಿರಿಯರ” ಬುದ್ದಿ ಇಲ್ಲದೇ ಇರುವುದು ಸಮಾಜದ ದುರ್ಧೈವ.ಹಾಗಾಗೇ “ಭಗವದ್ಗೀತೆ ಅಭಿಯಾನ” ಬಿಟ್ಟರೆ ಮತ್ಯಾವುದೇ ಕಾರ್ಯ ನಡೆಯುವುದಿಲ್ಲ.!!
·



* ಮಾತೆದ್ದಿದರೆ ೧ ಲಕ್ಷ:



ಇಗ ಇಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ೧ ಲಕ್ಷದ ಸುದ್ದಿ.ಮಹಾಸಂಕಲ್ಪ” ಕ್ಕೆ ಪ್ರತಿಯಾಗಿ ಈ ಸಭೆ ನಡೆಯುತ್ತಿರುವದರಿಂದ ಸಭೆಗೆ ೧ ಲಕ್ಷ ಜನರನ್ನು ಸೇರಿಸ ಬೇಕು ಎಂದು ಸ್ವರ್ಣವಲ್ಲಿ ಶ್ರೀಗಳ ಕಟ್ಟಪ್ಪಣೆ ಹೊರಟಿದೆ.ಶ್ರೀರಾಮಚಂದ್ರಾಪುರ ಮಠದ ಕಾರ್ಯಕ್ರಮಕ್ಕೆ ೪೫-೫೦ ಸಾವಿರ ಜನ ಸೇರಿದ್ದರೆ,ಅದಕ್ಕೆ ಪ್ರತಿ ಸಭೆ ಇದಾಗಿರುವುದರಿಂದ ಹೆಚ್ಚಿನ ಜನರನ್ನು ಸೇರಿಸುವ ಅನೀವಾರ್ಯತೆ ಸ್ವರ್ಣವಲ್ಲಿ ಶ್ರೀಗಳ ಮೇಲೆ ಇದೆ. ಹಾಗಾಗಿ ೧ ಲಕ್ಷ ದ ಮಾತು ಎಲ್ಲ ಕಡೆ ಕೇಳಿ ಬರುತ್ತಿದೆ.ಆದರೆ ಆ ಕಾರ್ಯಕ್ರಮಕ್ಕೆ ಅಷ್ಟು ಜನರನ್ನು ಎಲ್ಲಿಂದ ಕರೆದುಕೊಂಡು ಬರುತ್ತಾರೆ ಎನ್ನುವುದು ಯಕ್ಷ ಪ್ರಶ್ನೆ!!. ಶಿರಸಿ ಮತ್ತು ಯಲ್ಲಾಪುರ ಸ್ವರ್ಣವಲ್ಲಿ ಮಠಕ್ಕೆ ಸೇರಿದರೆ,ಸಿದ್ದಾಪುರ,ಕುಮಟ,ಗೋಕರ್ಣ,ಹೊನ್ನಾವರ ಇತರ ಪ್ರದೇಶ ಮತ್ತು ಶಿರಸಿ ಯಲ್ಲಾಪುರದ ಕೆಲವರು ರಾಮಚಂದ್ರಾಪುರ ಮಠಕ್ಕೆ ನಡೆದು ಕೊಳ್ಳುವುದರಿಂದ ಅವರ್ಯಾರು ಸಭೆಗೆ ಹೋಗರು.ಇನ್ನು ಶಿರಸಿ ಯಲ್ಲಪುರದ ಕೆಲವು ಮಂದಿಗೆ ಸ್ವರ್ಣವಲ್ಲಿಯಲ್ಲಿರುವ ತಮ್ಮ ಮಠವೇ ಎಲ್ಲಿದೆ ಎಂದು ತಿಳಿದಿಲ್ಲ.ಅವರು ಹೇಗೆ ಸಭೆಗೆ ಹೋಗುತ್ತಾರೆ.?ಇನ್ನು ಉಳಿದವರು ಮತ್ತು ಗೋಕರ್ಣದಲ್ಲಿ ವಿರೋಧಿಸುತ್ತಿರುವ ಕೆಲವರು ಸಭೆಗೆ ಕಡ್ಡಾಯವಾಗಿ ಬರುತ್ತಾರೆ.ಇನ್ನು ೧ ಲಕ್ಷ ಕನಸಿನ ಮಾತೇ ಸರಿ.



ಅಷ್ಟಕ್ಕೂ ಜನರನ್ನು ಸೇರಿಸುವ ತಾಕತ್ತು,ಪ್ರಭಾವ ಸ್ವರ್ಣವಲ್ಲಿಯವರಿಗೆ ಇದೆಯ ಅಂದರೆ ಅದೂ ಇಲ್ಲ.ಇವಾಗ ೧ ಲಕ್ಷ ಜನ ಸೇರುತ್ತಾರೆ ಎಂದು ಅಬ್ಬರದ ಪ್ರಚರ ನಡೆಸಲು ತಯಾರಾಗಿರುವ ಇವರು ,ಒಂದು ವೇಳೆ ರಾಮಚಂದ್ರಾಪುರ ಮಠ ಜನ ಸೇರಿಸದೇ ಕಾರ್ಯಕ್ರಮಕ್ಕೆ ೫೦ ಸಾವಿರ ಜನ ಸೇರಿರುವಾಗ ವಿರೋಧಿ ಸಭೆಗೆ ಜನರನ್ನು ಸೇರಿಸುವಾಗ ಕನೀಷ್ಠ ೫೦ ಸಾವಿರ ಜನರಾದರೂ ಸೇರಿದರೆ ಸ್ವರ್ಣವಲ್ಲಿಯವರ ಮರ್ಯಾದೆ ಉಳಿದಿತು.ಇಲ್ಲದಿದ್ದರೇ ಇರುವುದೂ ಮೂರಾಬಟ್ಟೆಗೆ ಹರಾಜಾಗುವುದರಲ್ಲಿ ಸಂಶಯವಿಲ್ಲ.





ಅಂತೂ ರಣರಂಗಸಜ್ಜಾಗುತ್ತಿದೆ.ದಿನದಿಂದ ದಿನಕ್ಕೆ “ಗೋಕರ್ಣ”ದ ಕಾವು ಏರುತ್ತಿದೆ.ಈ ಕಾವಿನಲ್ಲಿ ಇನ್ನೇಷ್ಟು ಜನ ಮೈಬಿಸಿ ಮಾಡಿಕೊಳ್ಳಬೇಕೋ??!!!


ನಿಮ್ಮ ಅನಿಸಿಕೆ, ಬೈಗುಳ ಅಥವಾ ಹೋಗಳಿಕೆಯನ್ನು ಇಲ್ಲಿಗೆ ಕಳಿಸಬಹುದು.
Mail to: bimbapratibimbablog@gmail.com







ಗೋಕರ್ಣದಲ್ಲಿ ಸೆ.೧೫ ರಂದು ನಡೆದ "ಮಹಾಸಂಕಲ್ಪ ಸಭೆಯ ವಿಡಿಯೋ ತುಣುಕು.

ಗೋಕರ್ಣದ ಅಭಿವೃದ್ದಿಗಾಗಿ ನಡೆದ ಮಹಾ ಸಂಕಲ್ಪ ಸಭೆಯಲ್ಲಿ ೫೦೦೦೦ ಕ್ಕೂ ಹೆಚ್ಚ್ಚಿನ ಮಂದಿ ಭಾಗವಹಿಸಿ ಪಾವನರಾದರೆ ,ದೊರದರ್ಶನ ವಾಹಿನಿಯು ನೆರಪ್ರಸಾರದಿಮ್ದ ಲಕ್ಷಾಂತರ ಮಂದಿ ನೋಡಿ ಪುನಿತರಾದರು.ಇವೆರಡನ್ನೂ ಮಿಸ್ ಮಾಡಿ ಕೊಂಡಿ ರುವವರಿಗೆ "ಬಿಂಬ ಪ್ರತಿಬಿಂಬದಿಂದ" ವಿಡಿಯೋ ತುಣುಕುಗಳ ದರ್ಶನ. ಹಾಗಾದರೆ ಶ್ರೀ ರಾಘವೇಶ್ವರ ಶ್ರೀ ಗಳು ಏನು ಮಾತನಾಡಿದರು?

Sunday, September 21, 2008

ಸಮಾಜದ ಸ್ವಾಸ್ಥ ಕಾಪಾಡುವ ಶ್ರೀಗಳೇ ಅಸ್ವಸ್ಥರಾದಾಗ....



ದಿನಾಂಕ ೧೫ ರಂದು ಸ್ವರ್ನವಲ್ಲಿಯಲ್ಲಿ "ಗೋಕರ್ಣ ದೇವಾಲಯ "ಹಸ್ತಾಂತರ ವಿರೋಧಿಗಳ ಸಭೆಯಲ್ಲಿ ಮಾತನಾಡುತ್ತಿರುವ ಸ್ವರ್ಣವಲ್ಲಿ ಶ್ರೀಗಳು / ಚಿತ್ರ - ಕರ್ನಾಟಕ ಫೋಟೋ ನ್ಯೂಸ್ ಸರ್ವೀಸ್ (ಕೆ.ಪಿ.ಎನ್ )




ಸ್ವಾಮಿಗಳು ಎಂದರೆ ಎಲ್ಲರಲ್ಲೂ ಒಂದು ರೀತಿಯಪುಜ್ಯ ಭಾವನೆ ಬೇರೂರಿರುತ್ತದೆ.ಇದಕ್ಕೆ ಕಾರಣ ಸ್ವಾಮಿಗಳಲ್ಲಿರುವ ಭಕ್ತಿ,ಶೃದ್ಧೆ .ಸ್ವಾಮಿಗಳು ಅಷ್ಟೆ , ತಮ ಭಕ್ತರ ,ಜಗತ್ತಿನ ಉದ್ಧಾರಕ್ಕಾಗಿ ಲೋಕಕಲ್ಯಾಣ ಕಾರ್ಯಗಳನ್ನು ಮಾಡಿ,ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಿ ಮೂಡಿಸುತ್ತಾರೆ.ಮೂಡಿಸುವುದು ಅವರ ಧರ್ಮ. ಪುರಾತನ ಜಗದ್ವೀಖ್ಯಾತ ಗೋಕರ್ಣದ ಮಹಾಭಲೇಶ್ವರ ದೇವಸ್ಥಾನವನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ ಬಳಿಕ ಉಂಟಾದ ಸನ್ನಿವೇಶ ,ಅದರಲ್ಲಿ ಸ್ವರ್ಣವಲ್ಲಿ ಶ್ರೀಗಳ ಮುಗು ತೂರಿಸುವಿಕೆ ಹೇಸಿಗೆ ಹುಟ್ಟಿಸು ವಂತದ್ದು (ಇದನ್ನು ಈಗಾಗಲೇ ಮತ್ತೊಂದು ಪೋಸ್ಟ್ ನಲ್ಲಿ ಹೇಳಲಾಗಿದೆ.) . ಸ್ವರ್ಣವಲ್ಲಿ ಶ್ರೀಗಳಿಗೆ ರಾಮಚಂದ್ರಾಪುರ ಮಠ ದ ಅಥವಾ ಅಲ್ಲಿನ ಶ್ರೀಗಳ ಮೇಲೆ ಸೇಡು ಅಥವಾ ಮತ್ಸರ ಇದ್ದರೆ ಸ್ವಾಮಿಜಿಯಾಗಿ ಅದನ್ನು ಮನಸಲ್ಲೇ ಇಟ್ಟುಕೊಳ್ಳಬೇಕಿತ್ತು.ಸ್ವಾಮಿಜಿಗಳೇ ಕಾಲು ಕೆದರಿ ಜಗಳಕ್ಕೆ ಅದು ಒಂದೇ ಪಂಗಡಕ್ಕೆ ಸೇರಿದ ಮಠದ ವಿರುದ್ಧ ಬೀದಿ ಕಾಳಗಕ್ಕೆ ಸಜ್ಜಾಗಿರುವುದು ಸ್ವರ್ಣವಲ್ಲಿ ಶ್ರೀಗಳ ಅಧಪತನಕ್ಕೆ ಸಾಕ್ಷಿ. ಸ್ವರ್ನವಲ್ಲಿಯವರು ವಿರೋಧಿಸಲಿ.ಸೂಕ್ತ ಕಾರಣವನ್ನು ಇಟ್ಟುಕೊಳ್ಳಲಿ.ಯಾವುದೇ ಸಾಕ್ಷ್ಯಾಧಾರವಿಲ್ಲದೆ ಪುಂಗಿ ಊದುವುದು ಅವರಿಗೆ ಸಾಧುವೇ?ಅಷ್ಟಕ್ಕೂ ಸ್ವಾಮಿಜಿಯಾಗಿ ತಮ್ಮ ಮನಸ್ಸನ್ನೇ ನಿಯಂತ್ರಿಸಿ ಕೊಳ್ಳಲಾಗದಷ್ಟು ಅವರ ಮನಸನ್ನು ಗೋಕರ್ಣ ತಿಂದು ಹಾಕಿದೆ.!!. ಇನ್ನು ಭಕ್ತರಿಗೆ ಅದೆಂಥ ಉಪದೇಶ ಮಾಡಬಲ್ಲರು??

**) ಮತ್ತೊಬ್ಬ ಸ್ವಾಮೀಜಿಗಳಿಗೆ ಏನೆನ್ನಬೇಕು ಎಂದು ತಿಳಿಯದ ಸ್ವರ್ಣವಲ್ಲಿ ಶ್ರೀ :

ಅಂದು ಗೋಕರ್ಣದಲ್ಲಿ ಅದ್ಧೂರಿ " ಗೋಕರ್ಣ ಪುನರುತ್ಥಾನ ಮಹಾಸಂಕಲ್ಪ " ಸಭೆ ನಡೆಯುತ್ತಿದ್ದರೆ ಸ್ವರ್ಣವಲ್ಲಿಯುವರು ೪೦೦ ಜನರನ್ನು ಕಟ್ಟಿಕೊಂಡು ಸಭೆ ನಡೆಸಿ "ಮಹಾನ್" ವ್ಯಕ್ತಿಯಾಗಿ ಹೊರಹೊಮ್ಮಿದರು. ಈ ಗೋಕರ್ಣ ವಿಷಯದಲ್ಲಿ ಈ ಮೊದಲು ಅಭಿವೃದ್ಧಿ ಬಗ್ಗೆ ಕಿಂಚಿತ್ತು ತಲೆ ಕೆಡಿಸಿಕೊಳ್ಳದ ಸ್ವರ್ಣವಲ್ಲಿ ಶ್ರೀಗಳು ಅದೇ ರಾಮಚಂದ್ರಾಪುರ ಮಠ ದ ಆಸ್ತಿ ಯಾದ ಗೋಕರ್ಣ ಅದೇ ಮಠಕ್ಕೆ ಬಂದರೆ ಮಾತ್ರ ಸ್ವರ್ಣವಲ್ಲಿಯವರಿಗೆ ಗೋಕರ್ಣ ನೆನಪಾಗುತ್ತದೆ. ಮತ್ತೊಂದು ಹೇಳಲೇ ಬೇಕಾಗಿದೆ. ಅಂದು ಸಭೆ ನಡೆಯುತ್ತಿದ್ದರೆ ಸ್ವರ್ಣವಲ್ಲಿಯವರು ಎಷ್ಟು ಸೀಮಿತ ಕಳೆದು ಕೊಂಡಿದ್ದರು ಎಂದರೆ ಸಭೆಯಲ್ಲಿ ಏನು ಹೇಳಬೇಕುಏನು ಹೇಳಬಾರದು ಎಂದು ತಿಳಿಯದೆ ಒದ್ದಾಡಿದರು.ತಮ್ಮ ಹಾಗೆ ಸಮಾಜವನ್ನು ಪ್ರತಿನಿಧಿಸುವ ಮತ್ತೊಂದು ಶ್ರೀಗಳನ್ನು ಹೇಗೆ ಸಂಬ್ಹೊಧಿಸಬೇಕು ಎಂದು ಗೊತ್ತಿಲ್ಲದೆ ತಮ್ಮ ಮನಸ್ಸನ್ನು ಎಲ್ಲರೆದುರು ಹೊರಹಾಕಿದರು. ಸಭೆಯಲ್ಲಿ ಮಾತನಾಡುತ್ತಾ ಶ್ರೀರಾಮಚಂದ್ರಾಪುರ ಮಠದ ಶ್ರೀಗಳನ್ನು "ಕಲಿ " (ಕಲಿ ಅಂದರೆ ಅತ್ಯಂತ ಕೀಳುಮಟ್ಟದ ಬೈಗುಳ) ಎಂದು ಸಂಭೋಧಿಸುವ ಕೀಳು ಮಟ್ಟಕ್ಕೆ ಇಳಿದು ತಮ್ಮ "ಸ್ವಚ್ಚ್" ಮನಸನ್ನು ತೋರಿಸಿದರು.ಶ್ರೀರಾಮಚಂದ್ರಾಪುರ ಮಠದಿಂದ ತುಘಲಕ್ ಮಾದರಿಯ ದರ್ಬಾರ್ ಆರಂಭವಾಗಿದೆ ಎನ್ನುವ ಸ್ವರ್ಣವಲ್ಲಿ ಶ್ರೀಗಳು ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎನ್ನುವುದನ್ನು ಮರೆತಿರುವಂತಿದೆ. ಅಷ್ಟಕ್ಕೂ ರಾಮಚಂದ್ರಾಪುರ ಮಠದ ಮೇಲೆ ಸ್ವರ್ಣವಲ್ಲಿಯವರಿಗೆ ಮತ್ಸರ ವೇಕೋ ? ದೇವರಿಗೂ ಉತ್ತರ ಗೊತ್ತಿಲ್ಲದಂತೆ ಕಾಣುತ್ತಿದೆ.

ಇಡೀ ರಾಜ್ಯಾದ್ಯಂತ "ಭಗವದ್ಗೀತೆ ಅಭಿಯಾನಕ್ಕೆ" ಚಾಲನೆ ನೀಡಿ ಮಹತ್ ಸಂಕಲ್ಪಕ್ಕೆ ಚಾಲನೆ ನೀಡಿದ್ದ ಸ್ವರ್ಣವಲ್ಲಿ ಶ್ರೀಗಳು ಭಗವದ್ಗೀತೆಯ ಸಾರವನ್ನೇ ಮರೆತಿರುವುದು ದುರ್ಧೈವ .ಅರಶಡ್ವೈರ್ಯಗನ್ನು ಜಯಿಸಿ ಸ್ವಾಮಿಜಿ ಎನ್ನುವ ಪಟ್ಟಕ್ಕೆ ಬರುವ ಶ್ರೀಗಳೇ ಇಂಥ ತುಚ್ಚ ಮಾತನ್ನಾಡುವುದು ಅವರ ಘನತೆಗೆ ಸಾಧುವಲ್ಲ. ಇನ್ನು ಮುಂದಾದರು ಇಂಥ ಕೀಳುಮಟ್ಟದ ಭಾವನೆಗಳನ್ನು ಬಿಟ್ಟು ಸಮಾಜದ ಒಂದು ಉತ್ತಮ ಪ್ರತಿನಿಧಿಯಾಗಿ ಕೆಲಸ ಮಾಡಿದರೆ ಜಗತ್ತಿಗೆ,ನಿಮ್ಮ (ನಮ್ಮೆಲ್ಲರ ) ಮಠ ಕ್ಕೆ ಉತ್ತಮ. ಮನಸಲ್ಲಿ ಮದ ಮತ್ಸರವನ್ನು ತುಂಬಿಕೊಂಡು ತಮ್ಮ ಮನಸ್ಸನ್ನೇ ಹಾಳು ಮಾಡಿಕೊಳ್ಳುತ್ತಿರುವ ಸ್ವರ್ಣವಲ್ಲಿಯ ಶ್ರೀಗಳಿಗೆ ಇಂಥ ವಿವಾದ ಬೇಕಿತ್ತಾ.?

Thursday, September 18, 2008

ಯೇಸು ಆದಷ್ಟು ಬೇಗ ನಿನ್ನ ಬಳಿಗೆ ಕರೆಯಿಸಿಕೋ....

ಯೇಸು ಆದಷ್ಟು ಬೇಗ ನಿನ್ನ ಬಳಿಗೆ ಕರೆಯಿಸಿಕೋ....
ಒಂದು ವಿಚಾರ ಬಹಳ ದಿನಗಳಿಂದ ತಲೆತಿನ್ನುತಿದೆ. ಏಕೆ ಕೆಲವೊಂದು ರಾಜಕೀಯ ನೇತಾರರು, ಮತ್ತು ತಮನ್ನು ಬುದ್ದಿಜೀವಿಗಳು ಎಂದು ಕರೆದುಕೊಳ್ಳುವ ಜನ ಕೇವಲ ಅಲ್ಪಸಂಖ್ಯಾತರನ್ನು ಮಾತ್ರ ರಕ್ಷಿಸಲು ಮುಂದೆ ಬರುತ್ತಾರೆ. ಅವರಿಗೆ ಬೇರೆಯವರು ಕಾಣುವುದಿಲ್ಲವೇ?. ನಿಜ ಹಿಂದುಗಳಾಗಿ ಹುಟ್ಟಿ,ಈ ಭೂಮಿಯ ಅನ್ನ, ನಿರು ತಿಂದು , ಈ ಕ್ರೀಮಿಕಿತಗಳು ನಮನ್ನೇ ತಿಂದು ತೆಗಲು ಸಂಚು ನಡೆಸಿವೆ. ಹೇಗೆ ಮತಾಂತರಿಗಳ ವಿರುದ್ದ ಸಮರ ಸಾರಿದೆವೋ ಅದೇ ರೀತಿ, ಮೊಯ್ಲಿ,ಖರ್ಗೆ,ದೇವೇಗೌಡ ನಂತಹ ಹಂದಿಗಳ ವಿರುದ್ದ ಕೂಡ ನಾವು ಸಮರ ಸಾರ ಬೇಕಾಗಿದೆ. ಸಮಯಕ್ಕೆ ತಕಂತ್ತೆ ತಮ್ಮ ಬಾಲ ಆಡಿಸುವ ಈ so called ನಾಯಕರು ನಮ್ಮ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಷ್ಟು ಬೆಳೆಯುತ್ತಿದ್ದಾರೆ . ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಗಲಾಟೆ ಸಮಯದಲ್ಲಿ ಎಷ್ಟೋ ಹಿಂದೂಗಳು ನಿರಾಶ್ರಿತರಾದರು, ಎಷ್ಟೋ ದೇವಾಲಯಗಳ ಮೇಲೆ ದಾಳಿ ಮಾಡಲಾಯಿತು. ಅದನ್ನು ಯಾರು ಪ್ರಶ್ನೆ ಮಾಡಲಿಲ್ಲ. ಕೇವಲ ಪಾದ್ರಿಗಳ, ಚರ್ಚಿನ ಜನರ ಮಾತನ್ನು ನಂಬಿ ತಮಗೆ ಇಷ್ಟ ಬಂದ ಹಾಗೆ ದೊಡ್ಡ ದೊಡ್ಡ ಮಾತನ್ನು ಆಡುತಿರುವ ಈ ಜನರು ನಮ್ಮ ರಾಜ್ಯವನ್ನು ಎಷ್ಟು ಉದ್ದಾರ ಮಾಡಿದ್ದಾರೆ ಎನ್ನುವುದು ಎಲ್ಲರಿಗು ಚೆನ್ನಾಗಿ ಗೊತ್ತು. ನಿಜ ಚರ್ಚಿನ ಮೇಲಿನ ದಾಳಿ ಖಂಡನೀಯ. ಆದರೆ ಅದರ ಹಿಂದಿನ ಉದ್ದೇಶ ಎಲ್ಲರಿಗು ಗೊತ್ತಿರುವುದೇ. ಅದೇ ರೀತಿ ಕರ್ನಾಟಕದ ಪ್ರಮುಖ ಪಟ್ಟಣವಾದ ಮಂಗಳೂರನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವವರ ವಿರುದ್ದ ಶಿಸ್ತ್ತಿನ ಕ್ರಮ ತೆಗೆದು ಕೊಳ್ಳ ಬೇಕಾಗಿದೆ. ಇಲ್ಲದಿದ್ದರೆ ಹೇಗೆ ಭಟ್ಕಳ ಮುಸ್ಲಿಮ ಮೂಲಭೂತವಾದಿಗಳ ತಾಣವಾಗಿ ಇವಾಗಲೇ ಪರಿವರ್ತನೆ ಆಗಿ ಬಿಟ್ಟಿದೆಯೋ, ಅದೇ ರೀತಿ ಮಂಗಳೂರಿನಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಸಮಯ ದೂರ ಇಲ್ಲ. ದಯವಿಟ್ಟು ಮೊಯ್ಲಿ,ಖರ್ಗೆ,ದೇವೇಗೌಡ ಮತ್ತು ಬುದ್ದಿಜೀವಿಗಳು ಆದಷ್ಟು ಬೇಗ ತಮ್ಮ ತಮ್ಮ ಮತಾಂತರ ಪ್ರಕ್ರಿಯೆ ಪೂರ್ತಿಗೊಳಿಸಿ ಆಮೇಲೆ ತಮ್ಮ ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳಲಿ , ಆ ಯೇಸುವಿನಲ್ಲಿ ಬೇಡಿಕೊಳ್ಳೋಣ

Wednesday, September 17, 2008

ಹಿಂದೂ ವಿಗೆ ಸುಣ್ಣ;ಕ್ರಿಸ್ತಿಯನ್ ಗೆ ಬೆಣ್ಣೆ....


ಮ್ಮ ರಾಜಕೀಯ ಮುಖಂಡರು ನಿದ್ರೆಯಿಂದ ಕೊನೆಗೂ ಎಚ್ಚೆತ್ತು ಕೊಳ್ಳುವ ಕಾಲ ಸನಿಹ ಬಂದಿದೆ.

ಹಿಂದೂ ಭೂಮಿಯಲ್ಲಿ ಬದುಕಿ, ಜೀವನ ಕಳೆದು,೮ ತಲೆ ಮಾರಿತಾಗುವಷ್ಟು ಸಂಪತ್ತನ್ನು ಸಂಪಾದಿಸುವ ಹಿಂದೂ ರಾಜಕಾರಣಿಗಳು ಹಿಂದೂ ವಿಗೆ ಏನಾದರು ತಲೆ ಕೆಡಿಸಿಕೊಳ್ಳುವುದಿಲ್ಲ.ಅದೇ "ಅಲ್ಪ ಸಂಖ್ಯಾತರು" ಎಂದು ಹೆಸರಾದವರಿಗೆ ೧ ಓಟಿಗಾಗಿ ಇನ್ನಿಲ್ಲದ ಸಹಾಯವೇ ಹರಿದು ಬರುತ್ತದೆ!! ಮೊನ್ನೆ ಮೊನ್ನೆಯಾದ ಮಂಗಳೂರಿನ ಘಟನೆಯನ್ನೇ ನೋಡಿ. ಅಲ್ಲಿ ಹಿಂದೂ ಕ್ರಿಸ್ತಿಯನ್ ಗಲಾಟೆಯಲ್ಲಿ ೨ ಕೊಮಿನವರಿಗೂ ಜೀವ ಹಾನಿ,ನಷ್ಟ ಉಂಟಾಯಿತು.ಆದರೆ ನಮ್ಮ ಕರ್ಣಾಟಕದ ಮೊದಲ ಪ್ರಧಾನಿ ದೇವೇಗೌಡರು ಮಾತ್ರ "ಅಲ್ಪ ಸಂಖ್ಯಾತರಿಗೆ " ಸಾಂತ್ವಾನ ಹೇಳಿ ಬಂದರು. ಬೆಂಗಳೂರಿನಲ್ಲಿ ಕುಳಿತು ಕೊಂಡು ಮಹಾನ್ ಕಾಂಗ್ರೆಸ್ಸ್ ಮುಖಂಡರು " ಅಲ್ಪಸಂಖ್ಯಾತರಿಗೆ " ಏನಾದರು ನಾವು ಸುಮ್ಮನಿರುವುದಿಲ್ಲ ಎಂದು ಅಬ್ಬರಿಸಿದರು.ಆದರೆ ಒಬ್ಬರು ಹಿಂದುವಿಗೆ ಏನಾಯಿತು ಎಂದು ಕೇಳಲು ಇಲ್ಲ.!!(ಬಿ.ಜೆ.ಪಿ ಒಂದು ಬಿಟ್ಟು ) ಪ್ರತಿ ವರ್ಷ ಇಂಥ ಘಟನೆ ನೂರಾರು ನಡೆಯುತ್ತದೆ.ಆದರೆ ಎಲ್ಲದಕ್ಕೂ ಹಿಂದೂ ಪರ ಸಂಘಟನೆಗಳನ್ನೇ ಹೊಣೆ ಮಾಡಲಾಗುತ್ತದೆ.ಅಂಥ ಘಟನೆಗಳಿಗೆ ಕಾರಣಿಕರ್ಥರು ಯಾರು ಎಂದು "ಭೂತ ಕನ್ನಡಿ " ಹಿಡಿದು ನೋಡಲು ಯಾರಿಗೂ ಸಮಯವಿಲ್ಲ. ಹಿಂದೂ ಭೂಮಿಯಲ್ಲಿ ಬದುಕಿ, ಅವರದೇ ಅನ್ನ ತಿನ್ನುತ್ತಾ , ಅವರ ಜನರನ್ನೇ ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುತ್ತರೆಂದರೆ?? ಹಿಂದೂಗಳು ನೋಡಿ ಸುಮ್ಮನಿರಬೇಕ? ಹಿಂದೂಗಳ ಬಗ್ಗೆ ಕೆಟ್ಟದಾಗಿ ಬರೆದು ಅವರ ನಾಡಲ್ಲೇ ಅದನ್ನು ವಿತರಣೆಮಾಡುವ ಧೈರ್ಯ ಅವರಿಗಿದ್ದರೆ ಅದನ್ನು ವಿರೋಧಿಸುವ ಧೈರ್ಯ ಹಿಂದುಗಳಿಗೆ ಅದಿಷ್ಟಿರಬೇಡ. ಹಿಂದೂಗಳ ಮೇಲೆ ಆರಂಭದಿಂದಲೂ ಅತಿಕ್ರಮಣ ನಡೆಯಿತ್ತಿತ್ತು ಎಂದು ಇತಿಹಾಸದ ಪುಸ್ತಕವೇ ಸಾರುತ್ತದೆ. ಅಂದು ಇತರ ಜನಾಂಗದವರು ಅದನ್ನು ಮಾಡುತ್ತಿದ್ದರೆ ಇಂದು ಹಿಂದೂ ಎನ್ನಿಸಿಕೊಂದವರೇ ಅದನ್ನು ಮಾಡುತ್ತಿರುವದು ದುರ್ಧೈವ. ಕಾಂಗ್ರೆಸ ನಾಯಕರು ಮತ್ತು ಜೆ.ಡಿ.ಎಸ್. ನ ಮುಖಂಡರು ಅಲ್ಪ ಸಂಖ್ಯಾತರು ಎನ್ನಿಸಿಕೊಂಡಿರುವ ಬಹು ಸಂಖ್ಯಾತರಿಗೆ ಬೆಂಬಲ ಕೊಡಲಿ.ಆದರೆ ಎಲ್ಲದಕ್ಕೂ ಹಿಂದೂ ಸಂಘಟನೆಗಳನ್ನು ದುರುವುದನ್ನು ನಿಲ್ಲಿಸಲಿ.

ಮರೆತ ಮಾತು:

ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ನವರು ಹಿಂದೂ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ.ಆದರೆ ದೇಶದಲ್ಲಿರುವ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವಂತೆ ಯಾವಾಗಲಾದರು ಹೇಳಿದ್ದಾರ??

Tuesday, September 16, 2008

"ಗೋ"ಕರಣ: ಸ್ವರ್ನವಲ್ಲಿಯಲ್ಲಿ ಬೆಂಕಿ !!!




ಶ್ರೀರಾಮಚಂದ್ರಾಪುರ ಮಠ v/s ಸ್ವರ್ಣವಲ್ಲಿ ಮಠ
  • ಮತ್ತೆ ಆರಂಭವಾಗಿದೆ ಕದನ..
  • ಪ್ರಾಬಲ್ಯಕ್ಕೆ ಜಿದ್ದಜಿದ್ದಿ
  • ಬುದ್ದಿ ಹೇಳಿದ ಪೇಜಾವರರು
  • ಗೋಕರ್ಣ ಅಭಿವ್ರದ್ದಿಗೆ ರಾಮಚಂದ್ರಾಪುರ ಮಠ ಶ್ರೀಗಳ ಸಾರಥ್ಯ
  • ವಿರೋಧಿಗಳ ಗುಂಪಿಗೆ ಸ್ವರ್ಣವಲ್ಲಿ ಶ್ರೀ ಸಾರಥ್ಯ







    ಕೊನೆಗೂ ಬೂದಿ ಮುಚ್ಚಿದ ಕೆಂಡ ಸ್ಪೋಟಗೋ ಂಡಿದೆ. ಗೋಕರ್ಣದಲ್ಲಿ ಸೆ.೧೫ ರಂದು ಅಲ್ಲಿಯ ಮಹಾಭಲೇಶ್ವರ ದೇವಾಲಯ ಶ್ರೀರಾಮಚಂದ್ರಾಪುರ ಮಠಕ್ಕೆ ಪುನ: ಬಂದಿರುವುದಕ್ಕೆ "ಮಹಾಸಂಕಲ್ಪ " ಸಭೆ ನಡೆಯುತ್ತಿದ್ದಾರೆ,ಹವ್ಯಕ ಸಮಾಜದ ಮತ್ತೊಂದು ಮಠವಾದ ಸ್ವರ್ಣವಲ್ಲಿ ಯಲ್ಲಿ ಇದನ್ನು ವಿರೋಧಿಸುವ ಸಭೆ ನಡೆಯುತ್ತಿತ್ತು!! ಗೊಕರ್ಣದೆವಾಲಯ ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂತರದ ನಂತರ ಉಂಟಾಗಿರುವ ವಾದ-ವಿವಾದದ ನಂತರ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಮೊದಲಬಾರಿಗೆ ಗೊಕರ್ಣ ಕ್ಕೆ ಭೆಟಿ ನೀಡಿ
    ಅದರ ಪುನರುತ್ಥಾನಕ್ಕೆ ಕಂಕಣ ಬದ್ಧರಾಗಿ "ಮಹಾಸಂಕಲ್ಪ" ಕ್ಕೆ ಕರೆ ನೀಡಿದ್ದರೆ ಹವ್ಯಕ ಸಮಾಜದ ಮತ್ತೊಂದು ಮಠ (ಸ್ವರ್ಣವಲ್ಲಿ ಮಠ) ಇದನ್ನು ಸ್ವಾಗತಿಸುವುದನ್ನು ಬಿಟ್ಟು ಸರಕಾರ ಗೊಕರ್ಣವನ್ನು ಹಿಂಪಡೆಯಬೇಕು ಎನ್ನುವ ವಿರೊಧಿಗಳನ್ನು ಕರೆಸಿಕೊಂಡು ಸಭೆ ನಡೆಸಿ ಇಷ್ಟುದಿನ ಮನಸ್ಸಿನೊಳಗಿದ್ದ ನೋವನ್ನು ಹೋರಹಾಕಿದರು.

    ಶ್ರೀರಾಮಚಂದ್ರಾಪುರ ಮಠ ಮತ್ತು ಸ್ವರ್ಣವಲ್ಲಿ ಮಠದ ನಡುವೆ ಪ್ರಾಬಲ್ಯಕ್ಕೆ ಜಿದ್ದಜಿದ್ದಿ ಮೊದಲಿನಿನ್ದಲೂ ಇದ್ದರು ಶ್ರೀರಾಮಚಂದ್ರಾಪುರ ಮಠ ದಷ್ಟು ಪ್ರಾಭಲ್ಯವನ್ನು ಧಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಶ್ರೀರಾಮಚಂದ್ರಾಪುರಮಠ ಈಗಿನ ಶ್ರೀಗಳ ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವ್ರದ್ದಿ ಕಂಡರೆ ಸ್ವರ್ಣವಲ್ಲಿ ಮಠದಲ್ಲಿ ಶ್ರೀಗಳನ್ನು ಮತ್ತು ಮಠವನ್ನು ನಿಯಂತ್ರಿಸುವ "ಭಟ್ಟಂಗಿಗಳು " ಮಾತ್ರ ಅಭಿವ್ರದ್ಧಿಯಾದರು.


    **)ಹವ್ಯಕ ಜನಾಂಗದ ೨ ಕಣ್ಣುಗಳು: ರಾಮಚಂದ್ರಾಪುರ ಮಠ ಮತ್ತು ಸ್ವರ್ಣವಲ್ಳಿ ಮಠಗಳು ಹವ್ಯಕ ಸಮಾಜದ
    ೨ ಕಣ್ಣು ಗಳು ಇದ್ದಂತೆ .ಇವು ಹವ್ಯಕ ಸಮಾಜದ ಮಠಗಳು.ರಾಮಚಂದ್ರಾಪುರ ಮಠ ಹವ್ಯಕ ಸಮುದಾಯದ ಜೊತೆ ಇತರ 18 ಜಾತಿಯನ್ನು ಒಳಗೊಂಡಿದೆ .ಆದರೆ ಸ್ವರ್ಣವಲ್ಳಿ ಮಠ ಕೇವಲ ಹವ್ಯಕರು ಅದರಲ್ಲೂ ಸೀರಸಿ ಮತ್ತು ಯಲ್ಲಾಪುರ ಭಾಗದ ಜನರು ಮಾತ್ರ ಹೆಚ್ಚಿಗೆ ನಡೆದು ಕೊಳ್ಳುತಾರೆ.ಹೆಚ್ಚಿನ ಹವ್ಯಕರು ರಾಮಚಂದ್ರಾಪುರ ಮಠಾಕ್ಕೆ ನಡೆದು ಕೊಳ್ಳುವುದರಿಂದ ಸ್ವರ್ಣವಲ್ಲಿಮಠ ಪ್ರಾಭಲ್ಯವನ್ನು ಸಾಧಿಸುವ ಕನಸು ಕನಸಾಗೇ ಉಳಿಯಿತು.ಕಳೆದವರ್ಷವಷ್ಟೇ ಒಂದೇ ವೇದಿಕೆಯಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದ ಉಭಯ ಶ್ರೀಗಳು ೨ ಮಠಗಳು ೨ ಕಣ್ಣು ಇದ್ದಂತೆ ಎಂದು ನುಡಿದಿದ್ದರು.ಆದರೆ ಅದನ್ನು ಮರೆತ ಸ್ವರ್ಣವಲ್ಲಿಶ್ರೀಗಳು ಸ್ವಾರ್ಥಸಾಧನೆಗೆ ಟೊಂಕಕಟ್ಟಿ ನಿಂತಿದ್ದಾರೆ,ತಾವು ವೊಬ್ಬ ಹವ್ಯಕ ಮಠಾಧೀಶ ಎಂಬುದನ್ನು ಮರೆತು.!


    ಶ್ರೀರಾಮಚಂದ್ರಾಪುರ ಮಠ ಗೋಕರ್ಣ ದೇವಾಲಯ ಬಂದ ಮೇಲೆ ಹವ್ಯಕ ಸಮುದಾಯದ ಮಠ ಕ್ಕೆ ಬಂತು
    ಎಂದು ಖುಷಿಪಡುವ ಬದಲು ೪ ದಿನದಲ್ಲಿ ಸರಕಾರದ ಕ್ರಮವನ್ನು ವಿರೋಧಿಸಿ ರಾಮಚಂದ್ರಾಪುರ ಮಠಕ್ಕೆ ಕೊಡಬಾರದು ಎಂದು ಪತ್ರಿಕಾ ಹೇಳಿಕೆ ನೀಡಿದರು. ಆಮೇಲೆ ವಿರೊಧಿಗಳ ಸಭೆ ಕರೆದು ಅವರಿಗೆ ಸಹಾಯ ಹಸ್ತವನ್ನು ನೀಡಿದರು.ಆದರೆ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ ಪಡಲಿಲ್ಲ.ವಿವಿಧ ಮಥಾಧೀಷರು ರಾಮಚಂದ್ರಾಪುರ ಮಠ ಕ್ಕೆ ಬೆಂಬಲ ವ್ಯಕ್ತ ಪಡಿಸಿದರೆ ಹವ್ಯಕ ಸಮಾಜದ ಶ್ರೀಗಳೇ ಬೆಂಬಲಿಸದೇ ಹವ್ಯಕರನ್ನು ಇಬಾಗಿಸಲು ಕಾರ್ಯ ತಂತ್ರ ರೂಪಿಸಿದ್ದಾರೆ ಎನ್ನುವುದು ಕೇಳಿಬರುತ್ತಿರುವ ಮಾತು.ಶ್ರೀರಾಮಚಂದ್ರಾಪುರ ಮಠ ಈಗಾಗಲೇ ಗೋಕರ್ಣ ದೇವಾಲಯ ಈ ಹಿಂದೆ ತನ್ನ ಸುಪರ್ಧಿಯಲ್ಲಿತ್ತು ಎಂದು ದಾಖಲೆಗಳನ್ನು ಸಲ್ಲಿಸಿದೆ.ಕೋರ್ಟನಲ್ಲೂ ಸಧ್ಯವೇ ವಿಚಾರಣೆಗೂ ಬರಲಿದೆ.ಒಂದು ವೇಳೆ ದಾಖಲೆಗಳು ಸರಿ ಇಲ್ಲ ಎಂದರೆ ಪುನ: ಸರಕಾರಕ್ಕೆ ದೇವಾಲಯ ಹೋಗುವುದರಲ್ಲಿ ಅನುಮಾನವಿಲ್ಲ.ಪುರಾತನ ,ಜಗದ್ವಿಖ್ಯಾತ ದೇವಸ್ಥಾನವನ್ನು ಯಾವ ಸರಕಾರವಾದರೂ ದಾಖಲೆಗಳೆ ಇಲ್ಲದೇ ಹಾಗೆ ಸುಮ್ಮನೇ ವಹಿಸಿಕೊಡುತ್ತದೆಯೇ?ಸರಕಾರ ಏನಾದರೂ ಶ್ರೀ ರಾಮಚಂದ್ರಾಪುರ ಮಠದ ಆಸ್ತಿಯೇ?.


    ಸ್ವರ್ಣವಲ್ಳಿ ಶ್ರೀಗಳು ಬುದ್ದಿವಂತರಾಗಿದ್ದಾರೆ ರಾಮಚಂದ್ರಾಪುರ ಮಠಕ್ಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದರು.ಹವ್ಯಕ ಸಮಾಜ ಒಂದಾಗಿದೆ ಎಂಬ ಸಂದೇಶವನ್ನು ರವಾನಿಸುತ್ತಿದ್ದರು.ಜನರಿಗೆ ಒಳ್ಳೆದನ್ನು ಮಾಡಿ ಎಂದು ಉಪದೇಶಿಸುವ ಶ್ರೀಗಳೇ ಶಿಷ್ಯರಲ್ಲಿ ಮತ್ಸರದ ಭಾವನೆಗಳನ್ನು ಬಿತ್ತುತ್ತಿರುವುದು ಸಾಮಾನ್ಯ ಜನತೆಗೂ ಒಬ್ಬ ಶ್ರೀಗಳಿಗೂ ಏನು ವ್ಯತ್ಯಾಸ ವೇನೆಂದು ಪ್ರಜ್ಞಾವಂತ ಜನತೆಯೇ ಮಾತಡಿಕೊಳ್ಳುತ್ತಿದ್ದಾರೆ.ಇದೆಲ್ಲ ಬೇಕಿತ್ತ ಸ್ವರ್ಣವಲ್ಲಿಶ್ರೀಗಳಿಗೆ ? ಎಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದುಕೊಳ್ಳುತ್ತದೆ.

    ಮಠದ ಆಸ್ತಿ ಮರಳಿ ಬಂದರೆ ಅದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದು ಸಾಧುವಲ್ಲ.ಯಾವುದೋ ಕಾಲಘಟ್ಟದಲ್ಲಿ ಶ್ರೀಮಠದ
    ಕೊಂಡಿಯಿಂದ ಕಳಚಿದ್ದ ಕೆಲವು ಕೊಂಡಿಗಳು ಈಗ ಮರಳಿ ಸೇರಿದರೆ ಉಳಿದವರಿಗೆ ಸಹಿಸಲು ಸಾಧ್ಯವಾಗುವುದಾದರೂ ಹೇಗೆ??!!.


    ಬುದ್ದಿ ಹೇಳಿದ ಪೇಜಾವರರು !
    ಸ್ವರ್ಣವಲ್ಲಿ ಯಾ ಶ್ರೀಗಳ ವಿರೋಧವನ್ನು ಕೇಳಿದ ಪೇಜಾವರರು ಸ್ವರ್ಣವಲ್ಲಿ ಶ್ರೀಗಳಿಗೆ ಬುದ್ದಿವಾದವನ್ನು ಹೇಳಿದ ಪ್ರಸಂಗ ನಡೆದಿರುವುದು ಸ್ವರ್ಣವಲ್ಲಿ ಶ್ರೀಗಳ ಮೊಂಡು ಹತಕ್ಕೊಂದು ಉದಾಹರಣೆ. "ನಿಮ್ಮ ಒಳಗಿನ ಅಸಮಾಧಾನವನ್ನು ಹೊರಗೆ ಹಾಕಬೇಡಿ.ಧಾರ್ಮಿಕ ಮುಖಂದರಲ್ಲೇ ಒಗ್ಗಟ್ಟಿಲ್ಲದಿದ್ದರೆ ಬೇರೆಯವರು ಕವಡೆ ಕಿಮ್ಮತ್ತು ಕೊಡುವುದಿಲ್ಲ ಧಾರ್ಮಿಕ ಕ್ಷೇತ್ರದಲ್ಲಿ "ರಾಜಕೀಯ " ಮಾಡಿ "ಹಸ್ತಕ್ಷೇಪ"ವನ್ನು ಕೈ ಬಿಡುವಂತೆ ಹೇಳಿರುವುದು ಹೊಸ ಸುದ್ದಿ.





    Website Hit Counters


    Web Counter