Sunday, September 21, 2008

ಸಮಾಜದ ಸ್ವಾಸ್ಥ ಕಾಪಾಡುವ ಶ್ರೀಗಳೇ ಅಸ್ವಸ್ಥರಾದಾಗ....



ದಿನಾಂಕ ೧೫ ರಂದು ಸ್ವರ್ನವಲ್ಲಿಯಲ್ಲಿ "ಗೋಕರ್ಣ ದೇವಾಲಯ "ಹಸ್ತಾಂತರ ವಿರೋಧಿಗಳ ಸಭೆಯಲ್ಲಿ ಮಾತನಾಡುತ್ತಿರುವ ಸ್ವರ್ಣವಲ್ಲಿ ಶ್ರೀಗಳು / ಚಿತ್ರ - ಕರ್ನಾಟಕ ಫೋಟೋ ನ್ಯೂಸ್ ಸರ್ವೀಸ್ (ಕೆ.ಪಿ.ಎನ್ )




ಸ್ವಾಮಿಗಳು ಎಂದರೆ ಎಲ್ಲರಲ್ಲೂ ಒಂದು ರೀತಿಯಪುಜ್ಯ ಭಾವನೆ ಬೇರೂರಿರುತ್ತದೆ.ಇದಕ್ಕೆ ಕಾರಣ ಸ್ವಾಮಿಗಳಲ್ಲಿರುವ ಭಕ್ತಿ,ಶೃದ್ಧೆ .ಸ್ವಾಮಿಗಳು ಅಷ್ಟೆ , ತಮ ಭಕ್ತರ ,ಜಗತ್ತಿನ ಉದ್ಧಾರಕ್ಕಾಗಿ ಲೋಕಕಲ್ಯಾಣ ಕಾರ್ಯಗಳನ್ನು ಮಾಡಿ,ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಿ ಮೂಡಿಸುತ್ತಾರೆ.ಮೂಡಿಸುವುದು ಅವರ ಧರ್ಮ. ಪುರಾತನ ಜಗದ್ವೀಖ್ಯಾತ ಗೋಕರ್ಣದ ಮಹಾಭಲೇಶ್ವರ ದೇವಸ್ಥಾನವನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ ಬಳಿಕ ಉಂಟಾದ ಸನ್ನಿವೇಶ ,ಅದರಲ್ಲಿ ಸ್ವರ್ಣವಲ್ಲಿ ಶ್ರೀಗಳ ಮುಗು ತೂರಿಸುವಿಕೆ ಹೇಸಿಗೆ ಹುಟ್ಟಿಸು ವಂತದ್ದು (ಇದನ್ನು ಈಗಾಗಲೇ ಮತ್ತೊಂದು ಪೋಸ್ಟ್ ನಲ್ಲಿ ಹೇಳಲಾಗಿದೆ.) . ಸ್ವರ್ಣವಲ್ಲಿ ಶ್ರೀಗಳಿಗೆ ರಾಮಚಂದ್ರಾಪುರ ಮಠ ದ ಅಥವಾ ಅಲ್ಲಿನ ಶ್ರೀಗಳ ಮೇಲೆ ಸೇಡು ಅಥವಾ ಮತ್ಸರ ಇದ್ದರೆ ಸ್ವಾಮಿಜಿಯಾಗಿ ಅದನ್ನು ಮನಸಲ್ಲೇ ಇಟ್ಟುಕೊಳ್ಳಬೇಕಿತ್ತು.ಸ್ವಾಮಿಜಿಗಳೇ ಕಾಲು ಕೆದರಿ ಜಗಳಕ್ಕೆ ಅದು ಒಂದೇ ಪಂಗಡಕ್ಕೆ ಸೇರಿದ ಮಠದ ವಿರುದ್ಧ ಬೀದಿ ಕಾಳಗಕ್ಕೆ ಸಜ್ಜಾಗಿರುವುದು ಸ್ವರ್ಣವಲ್ಲಿ ಶ್ರೀಗಳ ಅಧಪತನಕ್ಕೆ ಸಾಕ್ಷಿ. ಸ್ವರ್ನವಲ್ಲಿಯವರು ವಿರೋಧಿಸಲಿ.ಸೂಕ್ತ ಕಾರಣವನ್ನು ಇಟ್ಟುಕೊಳ್ಳಲಿ.ಯಾವುದೇ ಸಾಕ್ಷ್ಯಾಧಾರವಿಲ್ಲದೆ ಪುಂಗಿ ಊದುವುದು ಅವರಿಗೆ ಸಾಧುವೇ?ಅಷ್ಟಕ್ಕೂ ಸ್ವಾಮಿಜಿಯಾಗಿ ತಮ್ಮ ಮನಸ್ಸನ್ನೇ ನಿಯಂತ್ರಿಸಿ ಕೊಳ್ಳಲಾಗದಷ್ಟು ಅವರ ಮನಸನ್ನು ಗೋಕರ್ಣ ತಿಂದು ಹಾಕಿದೆ.!!. ಇನ್ನು ಭಕ್ತರಿಗೆ ಅದೆಂಥ ಉಪದೇಶ ಮಾಡಬಲ್ಲರು??

**) ಮತ್ತೊಬ್ಬ ಸ್ವಾಮೀಜಿಗಳಿಗೆ ಏನೆನ್ನಬೇಕು ಎಂದು ತಿಳಿಯದ ಸ್ವರ್ಣವಲ್ಲಿ ಶ್ರೀ :

ಅಂದು ಗೋಕರ್ಣದಲ್ಲಿ ಅದ್ಧೂರಿ " ಗೋಕರ್ಣ ಪುನರುತ್ಥಾನ ಮಹಾಸಂಕಲ್ಪ " ಸಭೆ ನಡೆಯುತ್ತಿದ್ದರೆ ಸ್ವರ್ಣವಲ್ಲಿಯುವರು ೪೦೦ ಜನರನ್ನು ಕಟ್ಟಿಕೊಂಡು ಸಭೆ ನಡೆಸಿ "ಮಹಾನ್" ವ್ಯಕ್ತಿಯಾಗಿ ಹೊರಹೊಮ್ಮಿದರು. ಈ ಗೋಕರ್ಣ ವಿಷಯದಲ್ಲಿ ಈ ಮೊದಲು ಅಭಿವೃದ್ಧಿ ಬಗ್ಗೆ ಕಿಂಚಿತ್ತು ತಲೆ ಕೆಡಿಸಿಕೊಳ್ಳದ ಸ್ವರ್ಣವಲ್ಲಿ ಶ್ರೀಗಳು ಅದೇ ರಾಮಚಂದ್ರಾಪುರ ಮಠ ದ ಆಸ್ತಿ ಯಾದ ಗೋಕರ್ಣ ಅದೇ ಮಠಕ್ಕೆ ಬಂದರೆ ಮಾತ್ರ ಸ್ವರ್ಣವಲ್ಲಿಯವರಿಗೆ ಗೋಕರ್ಣ ನೆನಪಾಗುತ್ತದೆ. ಮತ್ತೊಂದು ಹೇಳಲೇ ಬೇಕಾಗಿದೆ. ಅಂದು ಸಭೆ ನಡೆಯುತ್ತಿದ್ದರೆ ಸ್ವರ್ಣವಲ್ಲಿಯವರು ಎಷ್ಟು ಸೀಮಿತ ಕಳೆದು ಕೊಂಡಿದ್ದರು ಎಂದರೆ ಸಭೆಯಲ್ಲಿ ಏನು ಹೇಳಬೇಕುಏನು ಹೇಳಬಾರದು ಎಂದು ತಿಳಿಯದೆ ಒದ್ದಾಡಿದರು.ತಮ್ಮ ಹಾಗೆ ಸಮಾಜವನ್ನು ಪ್ರತಿನಿಧಿಸುವ ಮತ್ತೊಂದು ಶ್ರೀಗಳನ್ನು ಹೇಗೆ ಸಂಬ್ಹೊಧಿಸಬೇಕು ಎಂದು ಗೊತ್ತಿಲ್ಲದೆ ತಮ್ಮ ಮನಸ್ಸನ್ನು ಎಲ್ಲರೆದುರು ಹೊರಹಾಕಿದರು. ಸಭೆಯಲ್ಲಿ ಮಾತನಾಡುತ್ತಾ ಶ್ರೀರಾಮಚಂದ್ರಾಪುರ ಮಠದ ಶ್ರೀಗಳನ್ನು "ಕಲಿ " (ಕಲಿ ಅಂದರೆ ಅತ್ಯಂತ ಕೀಳುಮಟ್ಟದ ಬೈಗುಳ) ಎಂದು ಸಂಭೋಧಿಸುವ ಕೀಳು ಮಟ್ಟಕ್ಕೆ ಇಳಿದು ತಮ್ಮ "ಸ್ವಚ್ಚ್" ಮನಸನ್ನು ತೋರಿಸಿದರು.ಶ್ರೀರಾಮಚಂದ್ರಾಪುರ ಮಠದಿಂದ ತುಘಲಕ್ ಮಾದರಿಯ ದರ್ಬಾರ್ ಆರಂಭವಾಗಿದೆ ಎನ್ನುವ ಸ್ವರ್ಣವಲ್ಲಿ ಶ್ರೀಗಳು ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎನ್ನುವುದನ್ನು ಮರೆತಿರುವಂತಿದೆ. ಅಷ್ಟಕ್ಕೂ ರಾಮಚಂದ್ರಾಪುರ ಮಠದ ಮೇಲೆ ಸ್ವರ್ಣವಲ್ಲಿಯವರಿಗೆ ಮತ್ಸರ ವೇಕೋ ? ದೇವರಿಗೂ ಉತ್ತರ ಗೊತ್ತಿಲ್ಲದಂತೆ ಕಾಣುತ್ತಿದೆ.

ಇಡೀ ರಾಜ್ಯಾದ್ಯಂತ "ಭಗವದ್ಗೀತೆ ಅಭಿಯಾನಕ್ಕೆ" ಚಾಲನೆ ನೀಡಿ ಮಹತ್ ಸಂಕಲ್ಪಕ್ಕೆ ಚಾಲನೆ ನೀಡಿದ್ದ ಸ್ವರ್ಣವಲ್ಲಿ ಶ್ರೀಗಳು ಭಗವದ್ಗೀತೆಯ ಸಾರವನ್ನೇ ಮರೆತಿರುವುದು ದುರ್ಧೈವ .ಅರಶಡ್ವೈರ್ಯಗನ್ನು ಜಯಿಸಿ ಸ್ವಾಮಿಜಿ ಎನ್ನುವ ಪಟ್ಟಕ್ಕೆ ಬರುವ ಶ್ರೀಗಳೇ ಇಂಥ ತುಚ್ಚ ಮಾತನ್ನಾಡುವುದು ಅವರ ಘನತೆಗೆ ಸಾಧುವಲ್ಲ. ಇನ್ನು ಮುಂದಾದರು ಇಂಥ ಕೀಳುಮಟ್ಟದ ಭಾವನೆಗಳನ್ನು ಬಿಟ್ಟು ಸಮಾಜದ ಒಂದು ಉತ್ತಮ ಪ್ರತಿನಿಧಿಯಾಗಿ ಕೆಲಸ ಮಾಡಿದರೆ ಜಗತ್ತಿಗೆ,ನಿಮ್ಮ (ನಮ್ಮೆಲ್ಲರ ) ಮಠ ಕ್ಕೆ ಉತ್ತಮ. ಮನಸಲ್ಲಿ ಮದ ಮತ್ಸರವನ್ನು ತುಂಬಿಕೊಂಡು ತಮ್ಮ ಮನಸ್ಸನ್ನೇ ಹಾಳು ಮಾಡಿಕೊಳ್ಳುತ್ತಿರುವ ಸ್ವರ್ಣವಲ್ಲಿಯ ಶ್ರೀಗಳಿಗೆ ಇಂಥ ವಿವಾದ ಬೇಕಿತ್ತಾ.?

No comments: