Wednesday, September 24, 2008

ರಾಮಚಂದ್ರಾಪುರ ಮಠದ ಮಾನ ರಕ್ಷಣೆಗೆ ಸ್ವರ್ಣವಲ್ಲಿ ಶ್ರೀ!!!


ಅಂತು ಸ್ವರ್ಣವಲ್ಲಿ ಶ್ರೀಗಳಿಗೆ ಬುದ್ದಿ ಬಂದಂತಿದೆ.
ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಗೋಕರ್ಣ ವಿಷಯದಲ್ಲಿ ವೋರೋಧಿಸುತ್ ಟೊಂಕ ಕಟ್ಟಿ ನಿಂತಿದ್ದ ಅವರು ಇವಾಗ ತಮ್ಮ ನಿಲುವನ್ನು ಬದಲಿಸಿದ್ದಾರೆ!!! ಇಷ್ಟು ದಿನ ತಮ್ಮ ನಿಲುವನ್ನು ಎಲ್ಲರ
ಮುಂದೆ ಹೇಳಿ ನಗೆ ಪಾತಳಿಗೆ ಗುರಿಯಾಗಿದ್ದ ಸ್ವಾಮಿಜಿ ,ತಮ್ಮ ರಾಗದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದಾರೆ. ಇಷ್ಟು ದಿನ ತಮ್ಮ ಸ್ಪಷ್ಟ ಅಭಿಪ್ರಾಯ ಹೇಳಿದ್ದ ಅವರು ಇವಾಗ ಸರಕಾರಕ್ಕೆ ಪತ್ರ ಬರೆದು ದೇವಸ್ತಾನದ ಉಸ್ತುವಾರಿಯನ್ನು ಮಠಾಧೀಶರ ಸಮಿತಿಗೆ ಒಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.ಅಷ್ಟಲ್ಲದೆ, ಕೋರ್ಟ್ ನಲ್ಲೂ ಸರಕಾರಕ್ಕೆ ಮತ್ತು ದೇವಸ್ಥಾನ ತೆಗೆದುಕೊಂಡ ರಾಮಚಂದ್ರಾಪುರ ಮಠಕ್ಕೆ ಮುಖ ಭಂಗ ವಾಗಲಿದೆ ಎಂದು ಭವಿಷ್ಯವನ್ನು ನುಡಿದಿದ್ದಾರೆ!! ಅಷ್ಟಲ್ಲದೆ ಶ್ರೀರಾಮಚಂದ್ರಾಪುರ ಮಠಕ್ಕೆ ಇದರಿಂದ ಆಗುವ ಮುಖ ಭಂಗ ತಪ್ಪಿಸಲು ತಾವು ತಯಾರಿರುವುದಾಗಿ ಹೇಳಿ ತಮ್ಮ "ಅಸ್ವಸ್ಥತೆ" ಯನ್ನು ತೋರ್ಪಡಿಸಿದ್ದಾರೆ.ಶ್ರೀ ರಾಮಚಂದ್ರಾಪುರ ಮಠಕ್ಕೆ ಆಗುವ ಮುಖ ಭಂಗವನ್ನು ತಪ್ಪಿಸಲು ಸ್ವರ್ಣವಲ್ಲಿ ಶ್ರೀಗಳು ಉತ್ಸುಹಕರಾಗಿದ್ದರೆ, ಮಹಾಸಂಕಲ್ಪ ಸಭೆ ನಡೆಯುವಾಗ ವಿರೋಧಿಗಳ ಸಭೆ ಕರೆದಿದ್ದು ಯಾಕಾಗಿ? ಹಸ್ತಾಂತರಕ್ಕೆ ತಮ್ಮ ವಿರೋಧವಿದೆ.ಆದರೆ ರಾಮಚಂದ್ರಾಪುರ ಮಠಕ್ಕೆ ವಿರೋಧವಿಲ್ಲ. ಎನ್ನುವ ಅವರು, ರಾಮಚಂದ್ರಾಪುರ ಮಠದ ಶ್ರೀಗಳಿಗೆ ಕಲಿ, ತುಘಲಕ್ ಎಂದೆಲ್ಲ ಕರೆದಿದ್ದು ಯಾಕಾಗಿ? ಅಷ್ಟಕ್ಕೂ ಇವಾಗ ರಾಜಿ ಸೂತ್ರ ಮಾಡಿಕೊಳ್ಳದಿದ್ದರೆ ತಮಗೆ ಉಳಿಗಾಲ ಇಲ್ಲ ಎಂದು ತಿಳಿದು ರಾಘವೇಶ್ವರ ಶ್ರೀಗಳೊಂದಿಗೆ ರಾಜಿಗೆ ಪ್ರಯತ್ನ ಪಡುತ್ತಿರುವುದು ವಿಪರ್ಯಾಸವೇ ಸರಿ.ಗೋಕರ್ಣಕ್ಕೆ ಸಂಭಂಧ ಪಡದ ಶೃಂಗೇರಿ ಶ್ರೀಗಳು ಇವರಿಗೆ ಗೋಕರ್ಣ ಉದ್ಧಾರ ಮಾಡಲು ಯಾಕೆ ಬೇಕೋ? ಇವರು ವಿರೋಧ ಇಲ್ಲ ಎಂದು ಹೇಳಿದ್ದರೆ ಮಾಧ್ಯಮದಲ್ಲಿ ಮೊದಲು ಹಾಗೆ ವರಧಿ ಯಾಗುತ್ತಿತ್ತು. ಮಾಧ್ಯಮದವರು ತಿರುಚಿ ಬರೆದಿದ್ದರು ಮರುದಿನವೇ ಪ್ರತಿಕ್ರಿಯೆ ಕೊಡಬಹುದಿತ್ತಲ್ಲ? ರಾಮಚಂದ್ರಾಪುರ ಮಠ ಗೋಕರ್ಣ ತನ್ನ ಆಸ್ತಿ ಎಂದು ಹೇಳುತ್ತಿದ್ದರು ಅದರ ದಾಖಲೆಯನ್ನು ಪರಿಶೀಲಿಸಲು ಮುಂದಾಗದ ಅವರು, ಎಲ್ಲರ ಎದುರು ಮಾನ ಕಳೆದಾದ ಮೇಲೆ ಈಗ ಮಾನ ಉಳಿಸಲು ಪಯತ್ನ ಪಟ್ಟೆ ಎನ್ನುತ್ತಾ ಮತ್ತಷ್ಟು ಹಾಸ್ಯಾಸ್ಪದಆಗುತ್ತಿದ್ದಾರೆ . !!!

5 comments:

श्रीकान्त हॆगडे said...

ಹಾಗಲ್ಲ, ವಾಸ್ತವವಾಗಿ ಸರ್ಣವಲ್ಲೀ ಶ್ರೀಗಳು ವಿಶಾಲ ಹೃದಯಿಗಳೆ. ಆದರೆ ಉಳಿದ ಮಠಗಳಂತೆ ಅಲ್ಲಿ ಶ್ರೀಗಳು ಹೇಳಿದಂತೆ ಮಠದ ಕಂಬಗಳಾ ಘನ ಶಿಷ್ಯರು ಕೇಳುವುದಿಲ್ಲ. ಆ ಮಠದ ಆಢ್ಯರು ಹೇಳಿದತಂತೆ ಶ್ರೀಗಳು ನಡೆಯಬೇಕಾಗಿದೆ. ಗಟ್ಟಿ ಹೆಗಡೆಗಳು ಶ್ರೀಮಠವನ್ನು ಆಡಿಸುತ್ತಾರೆ. ಆ ದಿಶೆಯಲ್ಲಿ ಶ್ರೀಗಳು ಹಾಗೆಲ್ಲ ರಂಪಾಟ ಮಾಡಿದಂತೆ ಕಂಡಿದ್ದು.

Roopa said...

ಮಹಾಭಾಗರೇ,

ನಿಮ್ಮ ಹೆಸರು ಗೊತ್ತಾಗಲಿಲ್ಲ ನೋಡಿ... ಇರಲಿ ಅದು ಪ್ರಸ್ಥುತವಲ್ಲ.

ನಿಮ್ಮ ಅಭಿಪ್ರಾಯದಂತೆ ಸ್ವರ್ಣವಲ್ಲಿ ಶ್ರೀಗಳು ಸ್ವಂತ ನಿರ್ದಾರ ತೆಗೆದುಕೊಳ್ಳುವುದಿಲ್ಲವೆಂದಾಯಿತು. ಆದರೆ ಆ ಹೆಗಡೆಗಳ ಮಾತು ಕೇಳೋದಕ್ಕಿಂತ ಮುಂಚೆ ಒಮ್ಮೆ ಯೋಚಿಸಿದ್ದರೆ ಈ ರೀತಿ ಮುಖಬಂಗವಾಗುವುದು ತಪ್ಪುತ್ತಿತ್ತು. ದಿನಕ್ಕೊಂದು ಹೇಳಿಕೆ ನೀಡಿದರೆ ಹಾಸ್ಯಾಸ್ಪದವಾಗುತ್ತದೆ ಅಲ್ಲವೇ?

ಬಿಂಬ ಪ್ರತಿಬಿಂಬ Bimba Pratibimba said...

hesarallenide bidi!!!! charche munduvareyali!!!!!1

Sunil Bhat said...

Great work friends. Please continue the great job. I shall visit this blog once in a while to see what's latest.

Roopa said...

ಬಿಂಬರೇ...ನಿಮ್ಮ ಪ್ರತಿಬಿಂಬ ಇತ್ತೀಚೆಗೆ ಕಾಣಿಸ್ತಾಯಿಲ್ಲ. ಯಾಕೆ ಮಂಕಾದಿರಿ? ಬರೆಯಿರಿ.. ನಿರ್ಭಯದಿಂದ ಬರೆಯಿರಿ