Monday, September 22, 2008

ರಣರಂಗಕ್ಕೆ ವೇದಿಕೆ ಸಜ್ಜು






ರಣರಂಗಕ್ಕೆ ವೇದಿಕೆ ಸಜ್ಜು






  • "ಮಹಾಸಂಕಲ್ಪಕ್ಕೆ” ವಿರುದ್ಧವಾಗಿ ವಿರೊಧಿಗಳ ಸಭೆ


  • ಸ್ವರ್ಣವಲ್ಲಿ ಶ್ರೀಗಳ ಸಾರಥ್ಯ


  • ರಾಮಚಂದ್ರಾಪುರ ಮಠ ದ ಕಾರ್ಯಕ್ರಮಕ್ಕಿಂತ ಹೆಚ್ಚು ಜನರನ್ನು ಸೇರಿಸುವ ತವಕ


  • ರಾಮಚಂದ್ರಾಪುರ ಮಠಕ್ಕೆ ಸಡ್ಡುಹೊಡೆಯುವರೇ ಸ್ವರ್ಣವಲ್ಲಿ?


ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠ ಕ್ಕೆ ಹಸ್ತಾಂತರಿಸಿದ ಕ್ರಮದ ಪರ, ವಿರೋಧದ ನಡುವೆ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಅದ್ಧೂರಿ ಪುರ ಪ್ರವೇಶಿಸಿ ,”ಗೋಕರ್ಣ ಪುನರುತ್ಥಾನ ಮಹಾಸಂಕಲ್ಪ ಸಭೆ” ನಡೆಸಿ ಯಶಸ್ವಿಯಾದರೆ, ಈಗ ಆ ಸಮಾರಂಭಕ್ಕೆ ವಿರೋಧವಾಗಿ ಮತ್ತೊಂದು ಸಭೆ ಸಧ್ಯದಲ್ಲೇ ನಡೆಯಲಿದೆ.!!
ಗೋಕರ್ಣದ ಪುನರ್ ಸಂಕಲ್ಪಕ್ಕೆ ಪಣತೊಟ್ಟು ರಾಮಚಂದ್ರಾಪುರ ಮಠದ ಶ್ರೀಗಳು ಮಹಾಸಂಕಲ್ಪಕ್ಕೆ ಕರೆ ನೀಡಿದ್ದರೇ, ಈ ಸಮಾರಂಭಕ್ಕೆ ಪ್ರತಿ ಸಭೆಯನ್ನು (ಹಸ್ತಾಂತರ ವಿರೋಧ) ಕರೆದವರು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಶ್ರೀಗಳು.
ಈಗಾಗಲೇ ಹಸ್ತಾಂತರ ವಿರೋಧಿಸುತ್ತಿರುವ ಗಂಗಾಧರೇಂದ್ರ ಶ್ರೀಗಳು ಸಾರ್ವಜನಿಕವಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದು,ಇಂಥ ಸನ್ನಿವೇಶದಲ್ಲಿ ಸಧ್ಯದಲ್ಲೇ ಕುಮಟಾದಲ್ಲಿ ವಿರೋಧಿಗಳ “ಅದ್ಧೂರಿ” ಸಭೆಯನ್ನು ಆಯೋಜಿಸುತ್ತಿದ್ದಾರೆ.



* ಹಿರಿಯರಾದರು ಕಿರಿಯ ಬುದ್ದಿ.:



ಸೆ.೧೫ ರಂದು “ಮಹಾಸಂಕಲ್ಪ”ದ ದಿನ ಅಲ್ಲೇ ಪ್ರತಿಭಟನೆ ಮಾಡಲು ನಿರ್ಧರಿಸಿದ್ದ “ವಿರೋಧಿಗಳು” ಕಾನೂನು ತೊಡಕಿನಿಂದ ಸುಮ್ಮನಿರ ಬೇಕಾಯಿತು.ನಂತರ ಸ್ವರ್ಣವಲ್ಲಿ ಗೆ ಹೋಗಿ ಅಲ್ಲಿ ವಿರೋಧಿಗಳ ಸಭೆಯನ್ನು ಸ್ವರ್ಣವಲ್ಲಿ ಶ್ರೀಗಳ ನೇತ್ರತ್ವದಲ್ಲಿ ಮಾಡಿ ಮುಗಿಸಿದರು.
ಚಾತುರ್ಮಾಸ್ಯದ ಕೊನೆಯ ದಿನವಾದ ಅಂದು ಯತಿಗಳು ತಮ್ಮ ಮನಸ್ಸನ್ನು ಒಳ್ಳೆಯ ಕಾರ್ಯಕ್ಕೆ ಮೀಸಲಿಡಬೇಕಾದ ದಿನದಂದು ಬೇಡದ “ವಿರೋಧಿಗಳ” ಸಭೆ ಕರೆದರು.ಅತ್ತ ರಾಮಚಂದ್ರಾಪುರ ಮಠದ ಶ್ರೀಗಳು ಅಂದು ಗೋಕರ್ಣ ಮಹಾಸಂಕಲ್ಪದ ಸಮಾಜೋಪಕಾರಿ ಸಭೆ ಮಾಡಿ ಶಹಬಾಸ್ ಅನ್ನಿಸಿಕೊಂಡರೆ ಅದೇ ಮತ್ತೊಂದು ಶ್ರೀಗಳಾದ ಸ್ವರ್ಣವಲ್ಲಿಯವರು ಮತ್ತೊಂದು ಸಮಾಜದ ವಿರೋಧಿ ಕಾರ್ಯದಲ್ಲಿ ಮಗ್ನರಾಗಿದ್ದರು!!
ಇಲ್ಲೇ ಇರುವುದು ವ್ಯತ್ಸಾಸ. ಶ್ರೀರಾಮಚಂದ್ರಾಪುರ ಮಠ ಬೇರೆಯವರ ತಂಟೆ ತಕರಾರಿಗೆ ಹೋಗದೆ ತನ್ನ ಕಾರ್ಯದಲ್ಲಿ ಮಗ್ನವಾಗಿ ಇಷ್ಟು ಬೆಳೆದರೆ , ಬೆರೆಯವರು ಬೆಳೆಯುವುದನ್ನು ಸಹಿಸದ ಸ್ವರ್ಣವಲ್ಲಿ ಮಠ ಎಲ್ಲದರಲ್ಲೂ ಮೂಗು ತೂರಿಸಿ ಅಷ್ಟೆ ಹಿಂದುಳಿದಿತು.ಇಲ್ಲಿ ಮತ್ತೋಂದು ವಿಷಯವನ್ನು ಗಮನಿಸಬೇಕು. ಸ್ವರ್ಣವಲ್ಲಿಯವರು ರಾಮಚಂದ್ರಾಪುರ ಮಠದ ಶ್ರ್ರೀಗಳಿಗಿಂತ ಮುಂಚಿತವಾಗಿ ಪೀಠಾರೋಹಣ ಮಾಡಿದವರು.ಯತಿ ಪರಂಪರೆಯಲ್ಲಿ ಚಾತುರ್ಮಾಸ್ಯ ಹೆಚ್ಚಾದವರು ಹಿರಿಯರ ಸ್ಥಾನದಲ್ಲಿ ನಿಲ್ಲುತ್ತಾರೆ.ವಯಸ್ಸಿನಲ್ಲಿ ಈ ೨ ಯತಿಗಳು ಸಮಾನರಾದರೂ ಚಾತುರ್ಮಾಸ್ಯದ ವಿಷಯದಲ್ಲಿ ಸ್ವರ್ಣವಲ್ಲಿಯವರು ಹಿರಿಯರಾಗುತ್ತರೆ.ರಾಮಚಂದ್ರಾಪುರ ಮಠದ ಶ್ರ್ರೀಗಳಿಗಿಂತ ಸ್ವರ್ಣವಲ್ಲಿ ಶ್ರೀಗಳು ಹಿರಿಯರಾದರೂ “ಹಿರಿಯರ” ಬುದ್ದಿ ಇಲ್ಲದೇ ಇರುವುದು ಸಮಾಜದ ದುರ್ಧೈವ.ಹಾಗಾಗೇ “ಭಗವದ್ಗೀತೆ ಅಭಿಯಾನ” ಬಿಟ್ಟರೆ ಮತ್ಯಾವುದೇ ಕಾರ್ಯ ನಡೆಯುವುದಿಲ್ಲ.!!
·



* ಮಾತೆದ್ದಿದರೆ ೧ ಲಕ್ಷ:



ಇಗ ಇಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ೧ ಲಕ್ಷದ ಸುದ್ದಿ.ಮಹಾಸಂಕಲ್ಪ” ಕ್ಕೆ ಪ್ರತಿಯಾಗಿ ಈ ಸಭೆ ನಡೆಯುತ್ತಿರುವದರಿಂದ ಸಭೆಗೆ ೧ ಲಕ್ಷ ಜನರನ್ನು ಸೇರಿಸ ಬೇಕು ಎಂದು ಸ್ವರ್ಣವಲ್ಲಿ ಶ್ರೀಗಳ ಕಟ್ಟಪ್ಪಣೆ ಹೊರಟಿದೆ.ಶ್ರೀರಾಮಚಂದ್ರಾಪುರ ಮಠದ ಕಾರ್ಯಕ್ರಮಕ್ಕೆ ೪೫-೫೦ ಸಾವಿರ ಜನ ಸೇರಿದ್ದರೆ,ಅದಕ್ಕೆ ಪ್ರತಿ ಸಭೆ ಇದಾಗಿರುವುದರಿಂದ ಹೆಚ್ಚಿನ ಜನರನ್ನು ಸೇರಿಸುವ ಅನೀವಾರ್ಯತೆ ಸ್ವರ್ಣವಲ್ಲಿ ಶ್ರೀಗಳ ಮೇಲೆ ಇದೆ. ಹಾಗಾಗಿ ೧ ಲಕ್ಷ ದ ಮಾತು ಎಲ್ಲ ಕಡೆ ಕೇಳಿ ಬರುತ್ತಿದೆ.ಆದರೆ ಆ ಕಾರ್ಯಕ್ರಮಕ್ಕೆ ಅಷ್ಟು ಜನರನ್ನು ಎಲ್ಲಿಂದ ಕರೆದುಕೊಂಡು ಬರುತ್ತಾರೆ ಎನ್ನುವುದು ಯಕ್ಷ ಪ್ರಶ್ನೆ!!. ಶಿರಸಿ ಮತ್ತು ಯಲ್ಲಾಪುರ ಸ್ವರ್ಣವಲ್ಲಿ ಮಠಕ್ಕೆ ಸೇರಿದರೆ,ಸಿದ್ದಾಪುರ,ಕುಮಟ,ಗೋಕರ್ಣ,ಹೊನ್ನಾವರ ಇತರ ಪ್ರದೇಶ ಮತ್ತು ಶಿರಸಿ ಯಲ್ಲಾಪುರದ ಕೆಲವರು ರಾಮಚಂದ್ರಾಪುರ ಮಠಕ್ಕೆ ನಡೆದು ಕೊಳ್ಳುವುದರಿಂದ ಅವರ್ಯಾರು ಸಭೆಗೆ ಹೋಗರು.ಇನ್ನು ಶಿರಸಿ ಯಲ್ಲಪುರದ ಕೆಲವು ಮಂದಿಗೆ ಸ್ವರ್ಣವಲ್ಲಿಯಲ್ಲಿರುವ ತಮ್ಮ ಮಠವೇ ಎಲ್ಲಿದೆ ಎಂದು ತಿಳಿದಿಲ್ಲ.ಅವರು ಹೇಗೆ ಸಭೆಗೆ ಹೋಗುತ್ತಾರೆ.?ಇನ್ನು ಉಳಿದವರು ಮತ್ತು ಗೋಕರ್ಣದಲ್ಲಿ ವಿರೋಧಿಸುತ್ತಿರುವ ಕೆಲವರು ಸಭೆಗೆ ಕಡ್ಡಾಯವಾಗಿ ಬರುತ್ತಾರೆ.ಇನ್ನು ೧ ಲಕ್ಷ ಕನಸಿನ ಮಾತೇ ಸರಿ.



ಅಷ್ಟಕ್ಕೂ ಜನರನ್ನು ಸೇರಿಸುವ ತಾಕತ್ತು,ಪ್ರಭಾವ ಸ್ವರ್ಣವಲ್ಲಿಯವರಿಗೆ ಇದೆಯ ಅಂದರೆ ಅದೂ ಇಲ್ಲ.ಇವಾಗ ೧ ಲಕ್ಷ ಜನ ಸೇರುತ್ತಾರೆ ಎಂದು ಅಬ್ಬರದ ಪ್ರಚರ ನಡೆಸಲು ತಯಾರಾಗಿರುವ ಇವರು ,ಒಂದು ವೇಳೆ ರಾಮಚಂದ್ರಾಪುರ ಮಠ ಜನ ಸೇರಿಸದೇ ಕಾರ್ಯಕ್ರಮಕ್ಕೆ ೫೦ ಸಾವಿರ ಜನ ಸೇರಿರುವಾಗ ವಿರೋಧಿ ಸಭೆಗೆ ಜನರನ್ನು ಸೇರಿಸುವಾಗ ಕನೀಷ್ಠ ೫೦ ಸಾವಿರ ಜನರಾದರೂ ಸೇರಿದರೆ ಸ್ವರ್ಣವಲ್ಲಿಯವರ ಮರ್ಯಾದೆ ಉಳಿದಿತು.ಇಲ್ಲದಿದ್ದರೇ ಇರುವುದೂ ಮೂರಾಬಟ್ಟೆಗೆ ಹರಾಜಾಗುವುದರಲ್ಲಿ ಸಂಶಯವಿಲ್ಲ.





ಅಂತೂ ರಣರಂಗಸಜ್ಜಾಗುತ್ತಿದೆ.ದಿನದಿಂದ ದಿನಕ್ಕೆ “ಗೋಕರ್ಣ”ದ ಕಾವು ಏರುತ್ತಿದೆ.ಈ ಕಾವಿನಲ್ಲಿ ಇನ್ನೇಷ್ಟು ಜನ ಮೈಬಿಸಿ ಮಾಡಿಕೊಳ್ಳಬೇಕೋ??!!!


ನಿಮ್ಮ ಅನಿಸಿಕೆ, ಬೈಗುಳ ಅಥವಾ ಹೋಗಳಿಕೆಯನ್ನು ಇಲ್ಲಿಗೆ ಕಳಿಸಬಹುದು.
Mail to: bimbapratibimbablog@gmail.com







1 comment:

Unknown said...

ಒಳ್ಳೇ ಜೋಕು.. ಒಂದು ಲಕ್ಷ ಜನ ಸೇರಿಸ್ತಾರಂತಾ!!!

ಗೋಕರ್ಣದಲ್ಲಿ ಪ್ರತಿಭಟನೆ ಮಾಡಲು ಒಬ್ಬೋಬ್ಬರಿಗೆ ೨೦೦ ರೂ ಕೊಟ್ಟು ಕರೆಸಿದ್ದರಂತೆ. ಹೆಚ್ಚಿನವರು ಹೆಂಗಸರು. ಪ್ರತಿಭಟನೆಯ ನೇತ್ರತ್ವ ವಹಿಸಿದವರ ಕುಟುಂಬದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರಂತೆ. ಅವರೂ ಪಾಪ ಎನ್ಮಾಡ್ತಾರೆ. ಯಜಮಾನ ಹೇಳಿದ ಹಾಗೆ ಕೇಳ್ಬೇಕಲ್ವಾ.....
ಹಾಗೆ ಪ್ರತಿಭಟನೆಗೆ ಬಂದಾಗ ಅಲ್ಲಿ ನಮ್ಮ ಗುರುಗಳ ಭಾವಚಿತ್ರ ಇರೋ ಬ್ಯಾನರುಗಳು ಕಂಡವಂತೆ. ತಕ್ಷನ ಭಕ್ತಿಯಿಂದ ನಮಸ್ಕರಿಸಿದರಂತೆ

ಎನ್ ಬರೀ ಅಂತೆ ಕಂತೆ ಹೇಳ್ತೀರಾ ಅಂತಿರಾ... ನನ್ನ ಹತ್ತಿರದ ಸಂಭಂದಿಯೊಬ್ಬರು ಮೊನ್ನೆ ಅಲ್ಲಿ ಹೋಗಿ ಪ್ರತ್ಯಕ್ಷವಾಗಿ ನೋಡಿದರಂತೆ.

ಸ್ವರ್ಣವಲ್ಲಿಯವರು ಅವತ್ತು ವಿರೋಧಿ ಸಭೆ ನಡೆಸುವಾಗ ಎಲ್ಲರಿಗೂ(ತಮ್ಮ ಶಿಷ್ಯರಿಗೆ) ಹಾಜರಿರಬೇಕೆಂದು ಆಜ್ನೆ ಮಾಡಿದ್ದರಂತೆ. ಆದರೂ ೫೦೦ ಜನ ಆಗ್ಲಿಲ್ಲ. ಈಗ ಒಂದು ಲಕ್ಷ ಜನ ಸೇರಿಸ್ತಾರೆ ಅಂದ್ರೆ ನಂಬಬಹುದೇ...

ನಂಬಬಹುದೇ ಗೆಳತೀ..
ಇದನೂ...
ನಂಬಬಹುದೇ..

ಹಾಗಾದರೆ ಸುಮಾರು ದುಡ್ಡು ಬೇಕು...